ಶ್ರೀಮಂಗಲ, ಡಿ. 24: ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸಂಘಟನೆಯ ಆಶ್ರಯದಲ್ಲಿ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ತಾ. 25 ರಂದು(ಇಂದು) ಕೊಡವ ಜಾಗತಿಕ ಸಾಂಸ್ಕøತಿಕ ಸಮ್ಮಿಲನದ 5ನೇ ವರ್ಷದ ಕೊಡವ ಮಂದ್ ನಮ್ಮೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 9.30 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಸಾಂಸ್ಕøತಿಕ ಮೆರವಣಿಗೆ ಪೊನ್ನಂಪೇಟೆಯ ಮುಖ್ಯ ಬೀದಿಗಾಗಿ ತೆರಳಿ ಸಾಯಿ ಶಂಕರ ವಿದ್ಯಾಸಂಸ್ಥೆಯ ಮೈದಾನದಲ್ಲಿ ಸೇರಲಿದೆ. ಮೆರವಣಿ ಗೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಸಹಸ್ರಾರು ಜನರು ಭಾಗವಹಿಸಲಿದ್ದಾರೆ.

ಸಾಯಿ ಶಂಕರ ವಿದ್ಯಾಸಂಸ್ಥೆಯ ಮುಖ್ಯ ದ್ವಾರದಲ್ಲಿ ಮಂದ್ ತಂಡಗಳಿಗೆ ಸಾಂಪ್ರದಾಯಿಕವಾಗಿ ಮಂದ್ ಮರ್ಯಾದಿ ಮೂಲಕ ಸ್ವಾಗತಿಸಲಾಗುವದು. ವಿದ್ಯಾಸಂಸ್ಥೆಯ ಆವರಣದಲ್ಲಿ ಸಿದ್ಧಪಡಿಸಿರುವ ಸಭಾ ವೇದಿಕೆ ಕಾರ್ಯಕ್ರಮದಲ್ಲಿ ಕ್‍ರ್‍ನಾಲ್ ನಾಡ್‍ನ ನಾಡು ತಕ್ಕರಾದ ಚೆಪ್ಪುಡಿರ ಪೊನ್ನಪ್ಪ ಹಾಗೂ ಮತ್ತೂರು, ಕಿರುಗೂರು, ಬೆಸಗೂರು, ನಲ್ಲೂರು, ಕೋಟೂರು ಗ್ರಾಮದ ಊರು ತಕ್ಕರು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಪಾಂಡಂಡ ಮೇದಪ್ಪ, ದೆಹಲಿ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ, ಅರ್ಜುನ ಪ್ರಶಸ್ತಿ ಪುರಸ್ಕøತ ಅಂತರ್ರಾಷ್ಟ್ರೀಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ, ಮೈಸೂರಿನ ಸ್ತ್ರೀರೋಗ ತಜ್ಞೆ ಅಪ್ಪನೆರವಂಡ ಡಾ. ಸೋನಿಯ ಮಂದಪ್ಪ, ಅಂತರ್ರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಅರುಣ್ ಮಾಚಯ್ಯ, ಅಸೀಮಾ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ, ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೊಳೇರ ಝುರು ಗಣಪತಿ, ಪ್ರಶಾಂತಿ ನಿಲಯದ ಮುಖ್ಯಸ್ಥ ಅಜ್ಜಮಾಡ ಮದನ್ ಇವರುಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಕೊಡಗಿನ ವಿವಿಧೆಡೆಗಳಿಂದ ಸುಮಾರು 35 ಮಂದ್‍ಗಳು ಭಾಗವಹಿಸಲಿದ್ದು, ಈ ಮಂದ್‍ಗಳ ನಡುವೆ ಕೊಡವ ಸಾಂಸ್ಕøತಿಕ ಮತ್ತು ಜಾನಪದ ಕಲೆ ಮೂಲ ಸ್ವರೂಪದಲ್ಲೇ ಪೈಪೋಟಿ ನಡೆಯಲಿದೆ. ಜಿಲ್ಲೆಯ ಜನರಲ್ಲದೆ, ಕೊಡವ ಸಂಸ್ಕøತಿಯ ಮೇಲೆ ವಿಶೇಷ ಅಭಿಮಾನ ಹೊಂದಿರುವ ಹೊರ ದೇಶ ಮತ್ತು ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ನೆಲೆಸಿರುವ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ದ್ದಾರೆ ಎಂದು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಮಂದ್‍ಗಳ ನಡುವೆ ಉಮ್ಮತ್ತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಬೊಳಕಾಟ್, ವಾಲಗತ್ತಾಟ್, ಬಾಳೋಪಾಟ್ ಪೈಪೋಟಿ ನಡೆಯಲಿದೆ. ಅಲ್ಲದೆ, ಸಂಜೆ ಕೊಡವ ಸಂಸ್ಕøತಿಯ ಮೂವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೋಜಿ ಜಡೆರ ಬೋಜಕ್ಕ, ಕೊಂಬ ಮೀಸೆರ ಬಂಬೊ ಪೈಪೋಟಿಯು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿ ಸಲಾಗಿದೆ. ಮಧ್ಯಾಹ್ನ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಆಗಮಿಸುವ ವಾಹನಗಳಿಗೆ ವಿಶೇಷ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾ ಗಿದ್ದು, ಕಾರ್ಯಕ್ರಮಕ್ಕೆ 5 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಮಂಜು ಚಿಣ್ಣಪ್ಪ ಮಾಹಿತಿ ನೀಡಿದ್ದಾರೆ.