ಮಡಿಕೇರಿ, ಡಿ. 24: ಕೊಟ್ಟೂರು-ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ನಾಟೋಳಂಡ ಚೋಂದಮ್ಮ - ದೇವಯ್ಯ ಸ್ಮರಣಾರ್ಥವಾಗಿ ಜ. 2 ಮತ್ತು 3 ರಂದು ಕೊಡಗು ಜಿಲ್ಲೆಯ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಎರಡನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಹಾಗೂ ಚೆಸ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಬಾಲಕ-ಬಾಲಕಿಯರಿಗೆ ಪಂದ್ಯಗಳನ್ನು ಪ್ರತ್ಯೇಕವಾಗಿ ನಡೆಸಲಾಗುವದು. ಭಾಗವಹಿಸಲು ಇಚ್ಚಿಸುವ ಸ್ಪರ್ಧಿಗಳು ತಾ. 30 ರೊಳಗಾಗಿ ತಮ್ಮ ಹೆಸರನ್ನು ಶಾಲಾ ಮುಖ್ಯಸ್ಥರ ಮೂಲಕ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 9480447025, 9480480140 ಸಂಪರ್ಕಿಸಬಹುದು.