ವೀರಾಜಪೇಟೆ, ಡಿ. 23: ಅಕ್ಟೋಬರ್ ತಿಂಗಳಲ್ಲಿ ನಡೆದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಚುನಾವಣೆ ಯಲ್ಲಿ ನಾಲ್ಕು ಮತಗಳ ಅಂತರದಲ್ಲಿ ನಾನು ಸೋಲು ಅನುಭವಿಸಲು ಕಾರಣವಾಗಿದೆ. ಆದ್ದರಿಂದ ಚುನಾವಣೆಯ ಕುರಿತು ಕೂಲಂಕಷ ತನಿಖೆ ನಡೆಸಿ ಗೆದ್ದ ಅಭ್ಯರ್ಥಿ ಫಲಿತಾಂಶವನ್ನು ಅಸಿಂಧು ಎಂದು ಘೋಷಿಸಬೇಕೆಂದು ಇಲ್ಲಿನ ಹದಿನೈದನೇ ವಾರ್ಡ್ ಗಾಂಧಿನಗರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಫರ್ಧಿಸಿ ಸೋಲನ್ನು ಅನುಭವಿಸಿದ ಪಿ.ಎ. ಮಂಜುನಾಥ್ ಅವರು ಇಲ್ಲಿನ ಸಮುಚ್ಚಯ ನ್ಯಾಯಾಲಯದ ಸಿವಿಲ್ ಜಡ್ಜ್ ನ್ಯಾಯಾಲಯಕ್ಕೆ ದೂರಿನ ರಿಟ್ ಅರ್ಜಿ ಸಲ್ಲಿಸಿದ್ದಾರೆ.ಮಂಜುನಾಥ್ ಅವರ ರಿಟ್ ಅರ್ಜಿಯ ದೂರಿನಂತೆ ನ್ಯಾಯಾಧೀಶರು ಕೊಡಗು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ, ತಾಲೂಕು ಸಹಾಯಕ ಚುನಾವಣಾಧಿಕಾರಿ ತಾಲೂಕು ತಹಶೀಲ್ದಾರ್, ಒಂದರಿಂದ ಹದಿನೆಂಟು ವಾರ್ಡ್‍ಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ ಇಬ್ಬರು ರಿಟರ್ನಿಂಗ್ ಆಫೀಸರ್, ಹದಿನೈದನೇ ವಾರ್ಡ್‍ನಿಂದ ಬಿಜೆಪಿ ಪಕ್ಷದಿಂದ ಜೆಡಿಎಸ್ ಪಕ್ಷದ ಮಂಜುನಾಥ್ ವಿರುದ್ಧ ಗೆಲುವು ಸಾಧಿಸಿದ ಟಿ.ಎಂ. ಸುನೀತಾ, ಇದೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಎಲ್.ಅಂತೋಣಿ ಇವರುಗಳಿಗೆ ತಾ.17 ರಂದು ನ್ಯಾಯಾಲ ಯಕ್ಕೆ ಹಾಜರಾಗು ವಂತೆ ಸಮನ್ಸ್ ಜಾರಿ ಮಾಡಿದ್ದರಿಂದ ಈ ಆರು ಮಂದಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಜನವರಿ 5ಕ್ಕೆ ಮುಂದೂಡಿ ಅಂದು ಎಲ್ಲರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ.

ಪಿ.ಎ. ಮಂಜುನಾಥ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಪ್ರಕಾರ ಪಟ್ಟಣ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಲೋಪ ದೋಷವಿದ್ದು ಹದಿನೈದನೇ ವಾರ್ಡ್ (ಗಾಂಧಿನಗರ)ನ ಮತದಾರರ ಪಟ್ಟಿಯಲ್ಲಿ ಬೇರೆ ವಾರ್ಡ್‍ನ ಕೆಲವು ಮತದಾರರ ಹೆಸರಿದ್ದು ಇವರುಗಳು ಹದಿನೈದನೇ ವಾರ್ಡ್ ಸೇರಿದಂತೆ ಎರಡು ಕಡೆಗಳಲ್ಲಿ ಮತ ಚಲಾಯಿಸಿ ದ್ದರಿಂದ ಬಿಜೆಪಿಯ ಟಿ.ಎಂ. ಸುನೀತಾ ಗೆಲುವು ಸಾಧಿಸಲು ಕಾರಣವಾಗಿದೆ. ಸುಮಾರು ಹದಿನಾಲ್ಕು ಮಂದಿಯ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇದ್ದು, ಮತ ಚಲಾಯಿಸಿದ ಕುರಿತು ಸಾಕ್ಷಿ ಸಹಿತ ರಿಟ್ ಅರ್ಜಿಯಲ್ಲಿ ನಮೂದಿಸಲಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಹದಿನೈದನೇ ವಾರ್ಡ್‍ನ ಬಿಜೆಪಿಯ ಟಿ.ಎಂ. ಸುನೀತಾ 393 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರೆ.

(ಮೊದಲ ಪುಟದಿಂದ) ಜೆ.ಡಿಎಸ್. ಪಕ್ಷದ ಮಂಜುನಾಥ್ 4 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಚುನಾವಣಾ ಫಲಿತಾಂಶದ ದಾಖಲೆ ಪ್ರಕಾರ ಹದಿನೈದನೇ ವಾರ್ಡ್‍ಗೆ ಒಟ್ಟು ಚಲಾವಣೆಯಾದ ಮತಗಳು 810, ಈ ಪೈಕಿ 393 ಟಿ.ಎಂ.ಸುನೀತಾ ಮತಗಳನ್ನು ಪಡೆದರೆ ಪಿ.ಎ.ಮಂಜುನಾಥ್ 389 ಮತಗಳನ್ನು ಪಕ್ಷೇತರ ಅಭ್ಯರ್ಥಿ ಎಲ್.ಆಂತೋಣಿ 23ಮತಗಳನ್ನು ಪಡೆದಿದ್ದಾರೆ. ಈ ವಾರ್ಡ್‍ನಲ್ಲಿ (ನೋಟಾ)ಕ್ಕೆ 5 ಮತಗಳು ಬಿದ್ದಿವೆ.

ಪಟ್ಟಣ ಪಂಚಾಯಿತಿ ತಕರಾರು ರಿಟ್ ಅರ್ಜಿಯ ವಾದಿ ಪರ ಟಿ.ಪಿ.ಕೃಷ್ಣ ವಕಾಲತು ವಹಿಸಿದರೆ, ಪ್ರತಿವಾದಿ ಪರ ಬಿ.ರತ್ನಾಕರ ಶೆಟ್ಟಿ, ಚುನಾವಣಾಧಿಕಾರಿಗಳ ಪರವಾಗಿ ಸರಕಾರದ ಸಹಾಯಕ ಅಭಿಯೋಜಕರು ವಕಾಲತು ವಹಿಸಿದ್ದಾರೆ.

ಧಾರವಾಡದ ಪಾರ್ವತಿ ಇತರರು ಪಟ್ಟಣ ಪಂಚಾಯಿತಿ ಮೀಸಲಾತಿ ವಿರುದ್ಧ ಕೆಲವರು ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಂಡ ಹಿನೆÀ್ನಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮುಂದಿನ ಜನವರಿಯ ಮೊದಲ ವಾರದಲ್ಲಿ ನಡೆಸಲು ಸಿದ್ಧತೆ ನಡೆದಿದ್ದು ಸಹಾಯಕ ಚುನಾವಣಾಧಿಕಾರಿ ಚುನಾವಣೆ ನಡೆಸಲು ಸರಕಾರದ ಲಿಖಿತ ಆದೇಶಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.