ಶ್ರೀಮಂಗಲ, ಡಿ. 21: ಕೊಡವ ಸಂಸ್ಕøತಿಯ ಮೂಲ ನೆಲೆಯಾದ ಮಂದ್ ಪಂರಂಪರೆಯನ್ನು ತನ್ನ ಮೂಲ ಸ್ಥಾನದಲ್ಲೇ ಉಳಿಸಿ ಬೆಳೆಸುವದರೊಂದಿಗೆ ಮುಂದಿನ ಜನಾಂಗಕ್ಕೂ ವೈಶಿಷ್ಟ್ಯ ಪೂರ್ಣವಾದ ಮಂದ್ ಸಂಸ್ಕøತಿಯನ್ನು ಯಥವತ್ತಾಗಿ ಹಸ್ತಾಂತರಿಸುದರೊಂದಿಗೆ ಮಂದ್‍ನ ಭೀರ್ಯವನ್ನು ಇನ್ನಷ್ಟು ವೈಭವಿಸುವ ನಿಟ್ಟಿನಲ್ಲಿ ಯುನೈಟೆಡ್ ಕೊಡವ ಆರ್ಗನೈಷೆಶನ್ (ಯುಕೊ) ಸಂಘಟನೆ ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನ “ಯುಕೊ ಕೊಡವ ಮಂದ್ ನಮ್ಮೆ”ಈ ವರ್ಷ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ತಾ. 25ರಂದು ನಡೆಯಲಿದ್ದು, ಸಕಲ ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೆ ಮಂದ್ ನಮ್ಮೆಯ ಸಂಬಂಧ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಹಲವು ಸುತ್ತಿನ ಪೂರ್ವಭಾವಿ ಸಭೆಯನ್ನು ನಡೆಸಲಾಗಿದ್ದು ನಮ್ಮೆಯನ್ನು ಅರ್ಥಗರ್ಭಿತವಾಗಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.

ಈ ಬಗ್ಗೆ ಮಾತನಾಡಿದ ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕಳೆದ ನಾಲ್ಕು ವರ್ಷದಲ್ಲಿ ಮಂದ್ ನಮ್ಮೆಯನ್ನು ಮೂಲ ಸಂಸ್ಕøತಿಗೆ ಯಾವದೆ ಚ್ಯುತಿ ಬಾರದಂತೆ ಬಹು ವೈಶಿಷ್ಟ ಪೂರ್ಣವಾಗಿ, ಕಲಾತ್ಮಕವಾಗಿ ಆಯಾಯ ಮಂದ್ ಸಂಸ್ಕøತಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಾ ಇದೆ. ಇದೀಗ ಮಂದ್ ನಮ್ಮೆ ಜಾಗತಿಕ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದು ಜನಾಂಗ ಬಾಂಧವರು ಒಂದೆಡೆ ಸೇರುವ ಸಾಂಸ್ಕøತಿಕ ಸಮ್ಮಿಲನದ ಹಬ್ಬವಾಗಿ ಮಾರ್ಪಾಡು ಗೊಂಡಿದೆ. ಹಲವು ದಶಕಗಳಿಂದ ಮುಚ್ಚಿಹೋಗಿದ್ದ ಅದೆಷ್ಟೋ ಮಂದ್‍ಗಳು ಪುನರ್ ಪ್ರಾರಂಭ ವಾಗುವದರೊಂದಿಗೆ ಮಂದ್‍ನಲ್ಲಿ ಭಾಗವಹಿಸುವವರ ಸಂಖ್ಯೆಯು ವರ್ಷಂಪ್ರತಿ ಹೆಚ್ಚಾಗುತ್ತಿದ್ದು ಮಂದ್ ನಮ್ಮೆ ಇಂದು ಬಹಳ ಅರ್ಥಗರ್ಭಿತ ವಾಗಿ ಕಂಡುಬರುತ್ತಿದೆ. ಹೊರ ದೇಶದಲ್ಲಿರುವ ನಮ್ಮ ಜನಾಂಗ ಬಾಂಧವರು ಈ ಮಂದ್ ನಮ್ಮೆಯಲ್ಲಿ ಪಾಲ್ಗೊಳ್ಳುವದರ ಮೂಲಕ ಒಂದು ಹಂತದಲ್ಲಿ ಕಳಚಿಕೊಂಡಿದ್ದ ಕೊಡವ ಸಂಸ್ಕøತಿಯ ಮರು ಜೋಡಣÉಯಾಗುತ್ತಿರುವದು ಸಂತಸದ ವಿಚಾರ ಎಂದು ಹೇಳಿದ್ದಾರೆ.

ತಾ. 25ರಂದು 9.30 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಸಾಯಿಶಂಕರ ವಿದ್ಯಾಸಂಸ್ಥೆಯವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಪ್ರತಿಯೊಬ್ಬರು ಕೊಡವ ಪದ್ಧತಿಯ ಧಿರಿಸಿನೊಂದಿಗೆ ಭಾಗವಹಿಸುವಂತೆ ಮನವಿ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಮಂದ್ ಮಂದ್‍ಗಳ ನಡುವೆ ಪೈಪೋಟಿ ನಡೆಯಲಿದ್ದು, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಮಾತನಾಡಿ ಕೊಡವ ಸಂಸ್ಕøತಿಗೆ ತನ್ನದೆ ಆದ ಪರಂಪರೆಯಿದ್ದು ಅದನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಕರ್ತವ್ಯ. ಮಂದ್ ಸಂಸ್ಕøತಿಯನ್ನು ಉಳಿಸುವ ಬಗ್ಗೆ ಯುಕೋ ಸಂಘಟನೆ ಹಲವು ವರ್ಷಗಳಿಂದ ಶ್ರಮಿಸುತ್ತ ಬರುತಿದೆ. ಇವರ ಈ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕಾಗಿದೆ ಎಂದರು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಯುಕೋ ಸಂಘಟನೆಯ ಪ್ರಮುಖರಾದ ಚೆಪ್ಪುಡಿರ ಸುಜುಕರುಂಬಯ್ಯ, ಕಳ್ಳಿಚಂಡ ರಾಬಿನ್‍ಸುಬ್ಬಯ್ಯ, ಉಳುವಂಗಡ ಲೋಹಿತ್‍ಭೀಮಯ್ಯ ಉಪಸ್ಥಿತರಿದ್ದರು.