ಮಡಿಕೇರಿ, ಡಿ. 21: ಕೊಡಗು ದಂತ ವೈದ್ಯಕೀಯ ಸಂಘಕ್ಕೆ ಆರು ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಡಾ. ರತೀಶ್ ಬಿಳಿಮಲೆ, ಅತ್ಯುತ್ತಮ ಕಾರ್ಯದರ್ಶಿ ಡಾ. ಕೃಪಾಶಂಕರ್ ಇವರುಗಳಿಗೆ ಲಭಿಸಿದೆ. ಅಲ್ಲದೆ ಅತ್ಯುತ್ತಮ ಸಿಡಿಇ, ಸಿಡಿಹೆಚ್ ಹಾಗೂ ಸಂಘದ ವಾರ್ಷಿಕ ಚಟುವಟಿಕೆಗಳಿಗಾಗಿ ಎರಡು ಪ್ರಶಸ್ತಿಗಳು ಲಭಿಸಿವೆ. ಒಟ್ಟಾರೆ ಆರು ಪ್ರಶಸ್ತಿಗಳನ್ನು ಬೆಂಗಳೂರಿನಲ್ಲಿ ನಡೆದ ದಂತ ವೈದ್ಯಕೀಯ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನೀಡಲಾಯಿತು.