ಮಡಿಕೇರಿ, ಡಿ. 21: ಪ್ರಸಕ್ತ(2018-19) ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‍ಗೆ ರೂ. 1750ರ ದರದಲ್ಲಿ ಸಾಮಾನ್ಯ ಭತ್ತವನ್ನು ಮತ್ತು 1770 ರ ದರದಲ್ಲಿ ಎ ಗ್ರೇಡ್ ಭತ್ತವನ್ನು ಖರೀದಿಸಲು ಆದೇಶ ನೀಡಲಾಗಿದೆ. ಸರ್ಕಾರದ ಮಾರ್ಪಾಡು ಆದೇಶದಲ್ಲಿ ರೈತರ ಹಿತದೃಷ್ಟಿಯಿಂದ ರೈತರ ನೋಂದಣಿ ಅವಧಿಯನ್ನು ತಾ. 31 ರವರೆಗೆ ವಿಸ್ತರಿಸಲಾಗಿದೆ. ರೈತರು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ. ನಿಗದಿತ ಅವಧಿ ಮುಗಿದ ನಂತರ ನೋಂದಣಿ ಮಾಡಿಕೊಳ್ಳಲು/ ಭತ್ತ ಖರೀದಿಸಲು ಅವಕಾಶ ಇರುವದಿಲ್ಲ ಎಂಬದಾಗಿ ಮಡಿಕೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.