ಕುಶಾಲನಗರ, ಡಿ. 19: ಕುಶಾಲನಗರ ಜ್ಞಾನಭಾರತಿ ಸ್ಪೋಟ್ರ್ಸ್ ಕ್ಲಬ್‍ನ ಕಬಡ್ಡಿ ಆಟಗಾರ ಪಿ. ಹೇಮಂತ್‍ಕುಮಾರ್ ಮೈಸೂರು ವಿವಿಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ಮೂಲಕ ತಾ. 19 ರಿಂದ 24 ರವರೆಗೆ ಚೆನ್ನೈನಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾಕೂಟದಲ್ಲಿ ಮೈಸೂರು ವಿ.ವಿ. ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಮೈಸೂರು ಮಹಾಜನ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಹೇಮಂತ್‍ಕುಮಾರ್ ಪ್ರತಿಭಾವಂತ ಕ್ರೀಡಾಪಟುವಾಗಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹೇಮಂತ್‍ಕುಮಾರ್ ಕುಶಾಲನಗರದ ಕೈಗಾರಿಕಾ ಬಡಾವಣೆ ನಿವಾಸಿಗಳಾದ ಪ್ರತಾಪ್-ಗೀತಾ ದಂಪತಿಗಳ ಪುತ್ರ. ಕಬಡ್ಡಿಯಲ್ಲಿ ಹೆಚ್ಚಿನ ಸಾಧನೆ ತೋರುವ ನಿಟ್ಟಿನಲ್ಲಿ ಸ್ಥಳೀಯ ದೈಹಿಕ ಶಿಕ್ಷಕ ಹೆಚ್.ಎಸ್. ಉತ್ತಪ್ಪ ಅವರು ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದರು.