ಮಡಿಕೇರಿ, ಡಿ. 11: ಚೂರಿಕಾಡು, ಕುಟ್ಟ ಗ್ರಾಮದ ಬಾಡಗ ಸಾಂಸ್ಕøತಿಕ ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರ ತಂಡ ಮಳೆಹಾನಿ ಪ್ರದೇಶಗಳಾದ ಕಾಲೂರು, ಮಕ್ಕಂದೂರು, ತಂತಿಪಾಲ, ಹಟ್ಟಿಹೊಳೆ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಲಾಯಿತು.

ಕಾಲೂರಿನ ಪ್ರೋಜೆಕ್ಟ್ ಕೊಡಗು ಗೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತ ಮಹಿಳೆಯರು ಉತ್ಪಾದಿಸಿದ ಸಾಮಗ್ರಿಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡಲು ಅಗತ್ಯವಿರುವ ಎರಡು ಕಂಪ್ಯೂಟರ್ ಹಾಗೂ ಎರಡು ಯುಪಿಎಸ್ ಗಳನ್ನು ಮಂಡಳಿಯ ಪ್ರಮುಖರು ವಿತರಿಸಿದರು. ಅಲ್ಲದೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಸುರ ಕಾಳವ್ವ ಎಂಬವರಿಗೆ 20 ಸಾವಿರ ರೂ. ನೆರವನ್ನು ನೀಡಿದರು.

ಸಂಘದ ವತಿಯಿಂದ ಕೊಡವ ಸಮಾಜ ಒಕ್ಕೂಟದ ಪರಿಹಾರ ನಿಧಿಗೆ ಈಗಾಗಲೇ 1 ಲಕ್ಷ ರೂ.ಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷರಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ತಿಳಿಸಿದರು. ಉಪಾಧ್ಯಕ್ಷರಾದ ಕೋದಂಡ ಲೀಲಾ ಕಾರ್ಯಪ್ಪ, ಕಾರ್ಯದರ್ಶಿ ಕೋಳೆರ ಪುತಲಿ ಮುತ್ತಣ್ಣ, ಜಂಟಿ ಕಾರ್ಯದರ್ಶಿ ಮುಕ್ಕಾಟಿರ ಮುತ್ತು ಮಂದಣ್ಣ, ಖಜಾಂಚಿ ತೀತಿರ ಸಾಗಿ ಚಿಣ್ಣಪ್ಪ ಹಾಗೂ ಸಂಘದ ಸದದಸ್ಯರು ಭೇಟಿ ಸಂದರ್ಭ ಹಾಜರಿದ್ದರು.