ಮಡಿಕೇರಿ, ಡಿ. 11: “ಮನೆಯಲ್ಲಿ ಸಂಗ್ರಹಿಸಲ್ಪಟ್ಟಿದ್ದ ಸಾಮಗ್ರಿ ಆರ್.ಎಂ.ಸಿ”ಗೆ ಎಂದು ತಾ. 8-9-2018 “ಶಕ್ತಿ”ಯಲ್ಲಿ ಪ್ರಕಟಗೊಂಡ ಆರೋಪಕ್ಕೆ ಸಂಬಂಧಿಸಿದಂತೆ ತÀನ್ನ ಮೇಲೆ ವೃಥಾರೋಪ ಹೊರಿಸಲಾಗಿದೆ ಎಂದು ಗೌತಂ ಶಿವಪ್ಪ ದೂರಿದ್ದಾರೆ. ಈ ಸಂಬಂಧ ಅವರು ಗರಗಂದೂರು ಗ್ರಾಮದ ವಿ ಸುರೇಶ್ ಎಂಬವರ ವಿರುದ್ಧ ಮಡಿಕೇರಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲ್ಲಿಸಿದ್ದಾರೆ. ವಕೀಲರಾದ ಕುಂಞÂ ಅಬ್ದುಲ್ಲ ಅವರ ಮೂಲಕ ಸಲ್ಲಿಸಲಾದ ಈ ದೂರನ್ನು ಸ್ವೀಕರಿಸಿದ ನ್ಯಾಯಾಧೀಶರಾದ ಬಿ.ಕೆ. ಮನು ಅವರು ನೀಡಿರುವ ಆದೇಶದಲ್ಲಿ ದೂರುದಾರರು ನೀಡಿರುವ ದಾಖಲಾತಿಗಳು ಮತ್ತು ಸ್ವಯಂ ಹೇಳಿಕೆಯನ್ನು ಆಧüರಿಸಿ ಆರೋಪಿ ವಿರುದ್ಧ ಸೆ. 500 ಐಪಿಸಿ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪ್ರಕರಣದ ಪರಿಮಿತಿ ವ್ಯಾಪ್ತಿಗೆ ಬರುವ ಸುಂಟಿಕೊಪ್ಪ ಪೊಲೀಸ್ ಅಧಿಕಾರಿಗೆ ನಿರ್ದೇಶಿಸಿದ್ದಾರೆ. ಹರದೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಗೌತಂ ಶಿವಪ್ಪ ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ವಿರುದ್ಧ ಅನವಶ್ಯಕ ಆರೋಪ ಹೊರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.