ಭಾಗಮಂಡಲ, ಡಿ. 11: ತಲಕಾವೇರಿಯಲ್ಲಿ ಇಂದು ತೃತೀಯ ದಿನದ ಪರಿಹಾರ ಕಾರ್ಯಗಳು ಸಾಂಗವಾಗಿ ನೆರವೇರಿದವು. ಗಣಹೋಮ, ವಾರ್ಷಿಕ ಸಂಪ್ರೋಕ್ಷಣೆ, ಸಂಹಾರ ತತ್ವಹೋಮ, ತತ್ವ ಕಲಶ ಪೂಜೆ, ಅನುಜ್ಞಾ ಕಲಶ ಪೂಜೆ, ಸಂಹಾರ ತತ್ವ ಕಲಶಾಭಿಶೇಕ, ಜೀವ ಕಲಶ ಪೂಜೆ, ಜೀವೋದ್ವಾಸನೆ, ಶಯ್ಯಾಗಮನ, ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಧಾನ್ಯಾಧಿವಾಸ, ದ್ರವ್ಯ ಕಲಶ ಪೂಜೆ, ಕಲಶಾಧಿವಾಸ ನಡೆಯಲಿದೆ.
ತಾ. 12 (ಇಂದು) ರಂದು 12.47 ರ ಮೀನ ಲಗ್ನದಲ್ಲಿ ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ಈಗ ಇರುವ ಅಗಸ್ತ್ಯೇಶ್ವರ ದೇಗುಲವÀÅ ತಾತ್ಕಾಲಿಕವಾಗಿ ಮುಚ್ಚಲ್ಪಡಲಿದ್ದು ಅಷ್ಟಮಂಗಲದಲ್ಲಿ ಸೂಚಿಸಲ್ಪಟ್ಟ ಧಾರ್ಮಿಕ ಕಾರ್ಯಗಳು ನಡೆಯಲಿವೆÉ.
ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಅಗಸ್ತ್ಯೇಶ್ವರ ಪುನರ್ ಪ್ರತಿಷ್ಠಾಪನಾ ಕಾರ್ಯ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.