ಮಡಿಕೇರಿ, ಡಿ. 11: ರೋಟರಿ ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ಅವರು ತಾ. 14 ರಂದು ಮಡಿಕೇರಿ ರೋಟರಿ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ವಲಯ ಲೆಫ್ಟಿನೆಂಟ್ ಎನ್.ಪಿ. ಚೀಯಣ್ಣ ಉಪಸ್ಥಿತರಿರುವರು ಎಂದು ರೋಟರಿ ಅಧ್ಯಕ್ಷ ಓ.ಎಸ್. ಚಿಂಗಪ್ಪ, ಕಾರ್ಯದರ್ಶಿ ಮೃಣಾಲಿನಿ ಚಿಣ್ಣಪ್ಪ ತಿಳಿಸಿದ್ದಾರೆ.