ಹೆಬ್ಬಾಲೆ, ಡಿ. 8 : ಹೆಬ್ಬಾಲೆ ಗ್ರಾಮದಲ್ಲಿ ಶನಿವಾರ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಕ್ರೀಡೆ ಎತ್ತಿನಗಾಡಿ ಓಟ ಸ್ಪರ್ಧೆಗಳು ಪ್ರೇಕ್ಷಕರ ಮನಸೂರೆಗೊಳಿಸಿದವು.ಸ್ಥಳೀಯ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ 20ನೇ ವರ್ಷದ ಎತ್ತಿನ ಗಾಡಿ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗಳು ಜನಮನ ರಂಜಿಸಿದವು.ಈ ಗಾಡಿ ಓಟದ ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ರೈತರು ಸೇರಿದಂತೆ ಕೊಡಗು, ಮೈಸೂರು,ಚಿಕ್ಕಮಂಗಳೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನತೆ ಭಾಗವಹಿಸಿದ್ದರು.

ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 8 ಗ್ರಾಂ ಚಿನ್ನ ಹಾಗೂ 5 ಗ್ರಾಂ.ಚಿನ್ನ, ತೃತೀಯ ಬಹುಮಾನ ಸಮಧಾನಕರ ನಗದು ರೂಪದಲ್ಲಿ ವಿಜೇತರಿಗೆ ವಿತರಿಸಲಾಯಿತು.

ಎತ್ತಿನ ಗಾಡಿ ಸ್ಪರ್ಧೆಗೆ 20ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು.

ಎತ್ತಿನ ಗಾಡಿ ಓಟವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 100 ಮೀಟರ್ ದೂರ ನಿಗದಿಮಾಡಲಾಗಿತ್ತು.

ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯಾದ ಎತ್ತಿನ ಗಾಡಿ ಸ್ಪರ್ಧೆ ವಿಕ್ಷೀಸಿಸಲು ಸಾವಿರಾರೂ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಕ್ರೀಡಕೂಟಗಳನ್ನು ಜಿ.ಪಂ.ಕೃಷಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.

ಈ ಸಂದರ್ಭ ಮಾದರಿ ಯುವಕ ಸಂಘದ ಅಧ್ಯಕ್ಷದ ಎಚ್.ಆರ್.ಆದರ್ಶ, ಕಾರ್ಯದರ್ಶಿ

(ಮೊದಲ ಪುಟದಿಂದ) ಎಚ್.ಟಿ.ಸಂತೋಷ್, ಖಜಾಂಜಿ ಎಚ್.ಟಿ.ಪುನಿತ್, ಸಂಘಟನಾ ಕಾರ್ಯದರ್ಶಿ ಎಚ್.ಜೆ.ಶ್ರೀಧರ್, ದೈಹಿಕ ಶಿಕ್ಷಕರಾದ ಕೃಷ್ಣಮೂರ್ತಿ, ಕರುಂಬಯ್ಯ, ಬೋಜೇಗೌಡ, ಸಂತೋಷ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸಲಹೆಗಾರರಾದ ಎಚ್.ಜಿ.ಕುಮಾರ್, ಎಚ್.ಎನ್. ಮಂಜುನಾಥ್, ಹಾಜರಿದ್ದರು.

ಜಾತ್ರ್ರೆಯ ಅಂಗವಾಗಿ ಕ್ರಿಕೆಟ್, ವಾಲಿಬಾಲ್, ರಂಗೋಲಿ ಸ್ಪರ್ಧೆ, ಓಟ ಸ್ಪರ್ಧೆ ಹಾಗೂ ಉತ್ಸವ ಹಾಗೂ ಗೃಹಾಲಂಕಾರ ಸ್ಪರ್ಧೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಹುಮಾನ ವಿಜೇತರು : ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಾಲಿಗ್ರಾಮದ ಮಧು (11.25 ಸೆಕೆಂಡ್), ಕೆ.ಆರ್.ನಗರದ ರಾಜು (11.50 ಸೆಕೆಂಡ್) ಹಾಗೂ ತೃತೀಯ ಬುಮಾನ ಚಿಕ್ಕಮಂಗಳೂರಿನ ಹೇಮಂತ್ (11.56 ಸೆಕೆಂಡ್ ) ಬಹುಮಾನ ಪಡೆದರು.