ಕೂಡಿಗೆ: ಕೂಡಿಗೆಯ ಸೈನಿಕ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಮಡಿಕೇರಿ ಜಿಲ್ಲೆಯ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ವ್ಯಾಪ್ತಿಗೆ ಒಳಪಟ್ಟ ಎಸ್‍ಎಂಎಸ್ ಅಕಾಡೆಮಿ, ಅರಮೇರಿ, ವೀರಾಜಪೇಟೆ, - ಎಎಲ್‍ಜಿ ಕ್ರೆಸೆಂಟ್ ಶಾಲೆ ಮಡಿಕೇರಿ, - ಅಂಕುರ್ ಪಬ್ಲಿಕ್ ಶಾಲೆ, -ಬಿವಿಬಿ ಕೊಡಗು ವಿದ್ಯಾಲಯ ಮಡಿಕೇರಿ, -ನ್ಯಾಷನಲ್ ಅಕಾಡೆಮಿ ಶಾಲೆ, ಗೋಣಿಕೊಪ್ಪ, ಸೈನಿಕ ಶಾಲೆ ಕೊಡಗು, ಒಟ್ಟು ಆರು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಚಾಲನೆ ನೀಡಿದರು.
ಥ್ರೋಬಾಲ್‍ನಲ್ಲಿ ಬಾಲಕಿಯರ ಕಿರಿಯರ ವಿಭಾಗದ ಬಿವಿಬಿ ಕೊಡಗು ವಿದ್ಯಾಲಯ, ಮಡಿಕೇರಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದರೆ, ಎಸ್‍ಎಂಎಸ್ ಅಕಾಡೆಮಿ, ಅರಮೇರಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರು. ಥ್ರೋಬಾಲ್ ಬಾಲಕಿಯರ ಹಿರಿಯರ ವಿಭಾಗದಲ್ಲಿ ಎಸ್‍ಎಂಎಸ್ ಅಕಾಡೆಮಿ, ಅರಮೇರಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದರೆ, ಬಿವಿಬಿ ಕೊಡಗು ವಿದ್ಯಾಲಯ, ಮಡಿಕೇರಿ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದರು.
ವಾಲಿಬಾಲ್ ಕಿರಿಯರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದರೆ, ಎಸ್‍ಎಂಎಸ್ ಅಕಾಡೆಮಿ, ಅರಮೇರಿ, ವೀರಾಜಪೇಟೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರು. ವಾಲಿಬಾಲ್ ಹಿರಿಯರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಎಸ್‍ಎಂಎಸ್ ಅಕಾಡೆಮಿ, ಅರಮೇರಿ, ವೀರಾಜಪೇಟೆ ವಿದ್ಯಾರ್ಥಿಗಳು ಪಡೆದರು.
ಮುಖ್ಯ ಅತಿಥಿಗಳಾಗಿದ್ದ ಸೈನಿಕ ಶಾಲೆ ಕೊಡಗಿನ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಬೋಧಕ ಮತ್ತು ಬೋಧಕೇತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗೋಣಿಕೊಪ್ಪ: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ದಿನಾಚರಣೆಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಕುಂಞಪ್ಪ ಮೆಮೋರಿಯಲ್ ತುದಿಯಿಂದ ಶಾಲಾ ಕ್ರೀಡಾ ನಾಯಕನ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯು ಆಗಮಿಸಿತು.
ಕ್ರೀಡಾ ಜ್ಯೋತಿಯನ್ನು ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಹಾಗೂ ಪ್ರಾಂಶುಪಾಲ ಅರುಣ್‍ಕುಮಾರ್ ಸ್ವೀಕರಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕ್ರೀಡಾ ದಿನಾಚರಣೆಯನ್ನು ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕ್ರೀಡಾವಿಧಿ ಬೋಧಿಸಿದರು. ಶಾಲೆಯ ನಾಲ್ಕು ತಂಡಗಳು ಬ್ಯಾಂಡ್‍ಗೆ ತಕ್ಕಂತೆ ಪಥಸಂಚಲನ ನಡೆಸಿ ಗಮನ ಸೆಳೆದರು.
ಮುತ್ತಣ್ಣ ಹಾಗೂ ಮುತ್ತಪ್ಪ ಅವರ ತೀರ್ಪುಗಾರಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಥ್ರೋಬಾಲ್, ಫುಟ್ಬಾಲ್ ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲಾಯಿತು. ಇದೇ ಸಂದರ್ಭ ಶಿಕ್ಷಕರ ತಂಡಗಳ ನಡುವೆ ಥ್ರೋಬಾಲ್, ಫುಟ್ಬಾಲ್ ಪಂದ್ಯಾವಳಿಗಳು ನಡೆಯಿತು. ಎರಡು ದಿನಗಳ ಕ್ರೀಡಾಚಟುವಟಿಕೆ ನಡೆಯಿತು.
ಕುಶಾಲನಗರ: ಇಲ್ಲಿಗೆ ಸಮೀಪದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ತಂಡ ಪ್ರಥಮ ಸ್ಥಾನಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ನೆಲ್ಲಿಹುದಿಕೇರಿಯ ಆಂಗ್ಲೋ ವರ್ನಾಕುಲರ್ ಕಾಂಪೊಸಿಟ್ ಪ್ರೌಢಶಾಲೆ ತಂಡ ದ್ವಿತೀಯ ಹಾಗೂ ಹಾಸನ ಜಿಲ್ಲೆಯ ರಾಮನಾಥಪುರದ ದಕ್ಷಿಣ ಕಾಶಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ ಉತ್ತಮ ಸರಣಿ ಆಟಗಾರರಾಗಿ ಬೈಲುಕುಪ್ಪೆ ಸರ್ಕಾರಿ ಪ್ರೌಢಶಾಲೆ ತಂಡದ ಪ್ರವೀಣ್, ಉತ್ತಮ ದಾಳಿಕಾರನಾಗಿ ನೆಲ್ಲಿಹುದಿಕೇರಿ ತಂಡದ ಸನೂಬ್, ಉತ್ತಮ ರಕ್ಷಕ ಶಿವಮೊಗ್ಗ ತಂಡದ ಪ್ರಜ್ವಲ್, ಉತ್ತಮ ಆಟಗಾರನಾಗಿ ಜ್ಞಾನಗಂಗಾ ತಂಡದ ಸಲಾವುದ್ದಿನ್ ವೈಯಕ್ತಿಕ ಬಹುಮಾನ ಪಡೆದುಕೊಂಡರು.
ತೀರ್ಪುಗಾರರಾಗಿ ಮಂಗಳೂರಿನ ಮಹೇಶ್, ಸಿದ್ದಿಕ್, ಎಂ.ಎಸ್. ಗುಣಪಾಲ್, ಸಂದೀಪ್, ಸುರೇಶ್ ಗೌಡ, ಬೆಂಗಳೂರಿನ ಶಾಂತಕುಮಾರ್, ಡಾ. ಸದಾಶಿವಯ್ಯ ಎಸ್. ಪಲ್ಲೇದ್, ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್, ಭೀಮಯ್ಯ, ಪ್ರವೀಣ್ ಪಟೇಲ್ ಕಾರ್ಯನಿರ್ವಹಿಸಿದರು.
ಬ್ಯಾಡ್ಮಿಂಟನ್ ಪಂದ್ಯಾವಳಿ: ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕರ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ಫಾತಿಮಾ ಕಾನ್ವೆಂಟ್ ತಂಡ ಪ್ರಥಮ, ಅತ್ತೂರು ಜ್ಞಾನಗಂಗಾ ತಂಡ ದ್ವಿತೀಯ ಹಾಗೂ ಕೊಡಗರಹಳ್ಳಿ ಶಾಂತಿನಿಕೇತನ ಶಾಲಾ ತಂಡ ತೃತೀಯ ಸ್ಥಾನ ಗಳಿಸಿದವು. ಉತ್ತಮ ಆಟಗಾರರಾಗಿ ಜ್ಞಾನಗಂಗಾ ತಂಡ ಎ.ಎಂ. ಮಯೂರ್ ವೈಯಕ್ತಿಕ ಬಹುಮಾನ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲಾ ತಂಡ ಪ್ರಥಮ, ವೀರಾಜಪೇಟೆ ಕಾವೇರಿ ಶಾಲೆ ತಂಡ ದ್ವಿತೀಯ ಹಾಗೂ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ತಂಡ ತೃತೀಯ ಬಹುಮಾನಕ್ಕೆ ಭಾಜನರಾದರು.
ಕಾಲೇಜು ಆವರಣದಲ್ಲಿ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟ್ರಾರ್ ಡಾ. ಕೋಡಿರ ಲೋಕೇಶ್ ಮೊಣ್ಣಪ್ಪ ವೈಯಕ್ತಿಕ ಬಹುಮಾನಗಳನ್ನು ವಿತರಿಸಿದರು. ಸಮಾರೋಪ ಸಮಾರಂಭದಲ್ಲಿ ಜ್ಞಾನಗಂಗಾ ವಸತಿ ಶಾಲೆ ಕಾರ್ಯದರ್ಶಿ ಪಿ.ಎನ್. ಅನಂತಪದ್ಮನಾಭ, ಖಜಾಂಚಿ ಪಿ.ಎಸ್. ರಾಮ್ ದೇವಯ್ಯ, ಟ್ರಸ್ಟಿ ಟಿ.ಕೆ. ಸುಧೀರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೂಡಿಗೆ ವಾಲಿಬಾಲ್ ಆಟಗಾರ ಹೆಚ್.ಕೆ. ಸೋಮಶೇಖರ್ ಅವರನ್ನು ಈ ಸಂದರ್ಭ ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ನಾಪೆÇೀಕ್ಲು: ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗದಗ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ - ಬಾಲಕಿಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಾಪೆÇೀಕ್ಲು ಸೇಕ್ರೆಡ್ ಹಾಟ್ರ್ಸ್ ಶಾಲೆಯ ವಿದ್ಯಾರ್ಥಿ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಸೆನ್ಸಾಯ್ ನಾಗೇಂದ್ರಪ್ಪ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಮಡಿಕೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. 30 ರಂದು ನಗರದಲ್ಲಿ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಜಿಲ್ಲೆಯಲ್ಲಿರುವ ದಲಿತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್‍ಎಸ್‍ಎಲ್‍ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸುತ್ತಾ ಬರಲಾಗುತ್ತಿದೆ. ಇದರಿಂದಾಗಿ ದಲಿತ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಾಗಿದ್ದು, ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲೂ ತಾ. 30 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ 30ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಕಲ್ಯಾಣ ಇಲಾಖಾ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಬೆಂಗಳೂರಿನ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಜಾತಿ ದೃಢೀಕರಣ ಪತ್ರ, ಅಂಕಪಟ್ಟಿಯ ನಕಲು ಹಾಗೂ ಭಾವಚಿತ್ರವನ್ನು ತಾ. 20 ರೊಳಗೆ ಹೆಚ್.ಎಲ್. ದಿವಾಕರ್, ಜಿಲ್ಲಾ ಸಂಚಾಲಕರು, ದಲಿತ ಸಂಘರ್ಷ ಸಮಿತಿ, ಅಶೋಕಪುರ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 9481523648 ಅಥವಾ 9611766713 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ದಿವಾಕರ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮಾಜಿ ಸೈನಿಕ ಹೆಚ್.ಕೆ. ಗಣೇಶ್, ತಾಲೂಕು ಸಂಘಟನಾ ಸಂಚಾಲಕ ದೀಪಕ್ ಹಾಗೂ ನಗರ ಸಂಘಟನಾ ಸಂಚಾಲಕ ಸಿದ್ದೇಶ್ ಉಪಸ್ಥಿತರಿದ್ದರು.
ನಾಪೆÉÇೀಕ್ಲು: ರಾಜ್ಯ ಸರಕಾರದ ಆರ್.ಟಿ.ಈ. ನೀತಿಯಿಂದ ಕನ್ನಡ ಮಾಧ್ಯಮ ಶಾಲೆಗಳು ಅವನತಿ ಹೊಂದಲಿದ್ದು, ಇದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗ ಉನ್ನತೀಕರಣಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಕೆ.ಎ. ನಾಗೇಶ್ ಆತಂಕ ವ್ಯಕ್ತಪಡಿಸಿದರು.
ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾಮಟ್ಟದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರ್.ಟಿ.ಈ. ಶಿಕ್ಷಣ ವ್ಯವಸ್ಥೆ ಜಾರಿಯಾದಲ್ಲಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ ಏದುರಾಗಿದೆ. ಇದರಿಂದ ಕನ್ನಡ ಭಾಷೆಗೆ ಧಕ್ಕೆಯಾಗಿದೆ. ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಗೆ ಸೇರಿಸುವಂತಾಗಬೇಕು. ಸರಕಾರಿ ಸಂಬಳ ಪಡೆದು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿರುವದನ್ನು ಗಮನಿಸಿದರೆ, ಸರಕಾರಿ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಶಿಕ್ಷಕರೂ ಕೂಡ ಅನುಮಾನಿಸುವಂತಾಗಿದೆ ಎಂದರು. ಆದುದರಿಂದ ಆರ್.ಟಿ.ಈ. ವ್ಯವಸ್ಥೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ರಾಜ್ಯ ಸಮಿತಿಯ ಅಧ್ಯಕ್ಷ ಬಿ.ಜಿ. ಸಿದ್ದಲಿಂಗಪ್ಪ ಮಾತನಾಡಿ, ರಾಜ್ಯದ ಮಂತ್ರಿ-ಮಹೋದಯರು ಕನ್ನಡದ ಬಗ್ಗೆ ಮಾತನಾಡುತ್ತಾರೆ. ಕನ್ನಡದ ಉನ್ನತಿ ಬಗ್ಗೆ ಮಾತನಾಡುತ್ತಾರೆ. ಆದರೆ ಕನ್ನಡದ ಬಗ್ಗೆ ಅವರಿಗೆ ಕಿಂಚಿತ್ತೂ ಅಭಿಮಾನ ಇಲ್ಲ ಎಂದು ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ನಾಪೆÉÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಚಂದ್ರ, ವೀರಾಜಪೇಟೆ ತಾಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ನ್ಯಾನ್ಸಿ, ಮಡಿಕೇರಿ ತಾಲೂಕು ಅಧ್ಯಕ್ಷ ರಾಮಚಂದ್ರ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು, ಮುಖ್ಯ ಶಿಕ್ಷಕ ಸುರೇಶ್ ಇದ್ದರು.
ಸಿದ್ದಾಪುರ: ಇತ್ತೀಚೆಗೆ ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಪ್ರೌಢಶಾಲಾ ಮಕ್ಕಳ ಕಬಡ್ಡಿ ಪಂದ್ಯಾವಳಿಯಲ್ಲಿ ನೆಲ್ಲಿಹುದಿಕೇರಿಯ ಆಂಗ್ಲೋವರ್ನಾಕ್ಯುಲರ್ ಪ್ರೌಢಶಾಲಾ ಮಕ್ಕಳು ದ್ವಿತೀಯ ಸ್ಥಾನಗಳಿಸಿ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಕಬಡ್ಡಿ ಪಂದ್ಯಾಟದಲ್ಲಿ ಎಂ.ಎ. ಮೊಹಮ್ಮದ್ ಸನೂಬ್ ಉತ್ತಮ ಧಾಳಿಗಾರನಾಗಿ ಪ್ರಶಸ್ತಿಗಳಿಸಿದರು. ಅಂತರ್ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು ಪಾಲ್ಗೊಂಡಿದ್ದು, ಪಂದ್ಯಾಟದ ಪ್ರಥಮ ಸ್ಥಾನವನ್ನು ಶಿವಮೊಗ್ಗ ಜಿಲ್ಲೆಯು ಪಡೆದುಕೊಂಡಿತು.
ಮಡಿಕೇರಿ: ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬಾಲನ್ಯಾಯ ಮಂಡಳಿ ಸದಸ್ಯ ಅಬ್ದುಲ್ ರಿಯಾಜ್ ತಿಳಿಸಿದರು.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ವೈಯಕ್ತಿಕ ಪೋಷಣಾ ವರದಿ, ಸಾಮಾಜಿಕ ತನಿಖಾ ವರದಿ ಹಾಗೂ ದಾಖಲಾತಿ ನಿರ್ವಹಣೆ ತಯಾರಿಸುವ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ಮಾನಸಿಕ ಸ್ಥಿತಿಗತಿಯನ್ನು ತಿಳಿದು ಅಂತಹ ಮಕ್ಕಳನ್ನು ಸರಿದಾರಿಗೆ ತರುವಂತಹ ಕೆಲಸಕ್ಕೆ ಮುಂದಾಗಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿ, ಬಾಲ ನ್ಯಾಯ ಮಂಡಳಿ ಕಾಯ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.
ಪ್ರತಿಯೊಂದು ಮಕ್ಕಳಿಗೂ ಬೇರೆ ಬೇರೆ ತರನಾದ ಆರೈಕೆಯ ಅವಶ್ಯಕತೆ ತಿಳಿದು ಕುಟುಂಬ ವಾತಾವರಣದಲ್ಲಿ ಮಕ್ಕಳು ಬೆರೆಯುವಂತಾಗಲು ಎಲ್ಲಾ ರೀತಿಯ ನೆರವು ನೀಡುವದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ನಮಿತಾ ರಾವ್ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಒಂದು ತಂಡದ ರೀತಿ ಕೆಲಸ ಮಾಡಬೇಕು. ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ಹಿತರಕ್ಷಣೆಗಾಗಿ ತಮ್ಮ ಸ್ವಂತ ಮಕ್ಕಳಿಗೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿ ಹಾಗೂ ಕಾಳಜಿಯನ್ನು ನೀಡುವದರ ಮೂಲಕ ಅವರ ಮನಸ್ಸಿನಲ್ಲಿರುವಂತಹ ಅಸಮಾದಾನವನ್ನು ದೂರಮಾಡಿ ಉತ್ತಮ ಪ್ರಜೆಗಳನ್ನಾಗಿ ಅವರನ್ನು ನಿರ್ಮಿಸಬಹುದು ಎಂದು ನುಡಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಯಾದ ಸುಮತಿ ಮಾತನಾಡಿ, ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದ ನಂತರ ಇದರ ಅನುಷ್ಠಾನವನ್ನು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯರೂಪಕ್ಕೆ ತರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸರ್ಕಾರ ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆಗಾಗಿ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಇತರ ಮಕ್ಕಳಂತೆ ಇವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವಾಗಬೇಕಿದೆ ಎಂದು ತಿಳಿಸಿ, ಮಕ್ಕಳ ರಕ್ಷಣೆ ಕುರಿತು ಅನೇಕ ವಿಚಾರಗಳನ್ನು ಕಾರ್ಯಾಗಾರದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಇತರರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ಸೇವೆಯ ರಕ್ಷಣಾಧಿಕಾರಿ ಡಿ.ಕೆ. ಮಂಜುನಾಥ್ ನಿರೂಪಿಸಿದರು.ಮಡಿಕೇರಿ: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್, ಸರ್ಕಾರಿ ಪ್ರೌಢಶಾಲೆ ಕಿರಗಂದೂರು ಮತ್ತು ಸೀಕೋ ಸಂಸ್ಥೆ ಬಾನುಗೊಂದಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಯಿತು.
ದಿನದ ಆಚರಣೆಯ ಸಲುವಾಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮಕ್ಕಳಿಗೆ ಸಂವಾದ, ಚಿತ್ರಕಲೆ ಮತ್ತು ಸ್ಲೋಗನ್ ರಚನೆಯಂತಹ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 16 ಸರ್ಕಾರಿ ಪ್ರೌಢಶಾಲೆಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗೃಹ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಕಿರಗಂದೂರಿನ ಶಿಕ್ಷಕಿಯಾದ ರಶ್ಮಿ, ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನ ಶಿಕ್ಷಕ ಕೆ.ಎನ್. ದಿನೇಶ್ ಅವರನ್ನು ಶಾಲೆಯಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಸೇವೆಗಾಗಿ ಸೀಕೋ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಸೀಕೋ ಸಂಸ್ಥೆಯ ನಿರ್ದೇಶಕ ಡಾ. ಹರೀಶ್‍ಕುಮಾರ್ ಪರಿಸರದ ಬಗ್ಗೆ ಬೋಧನೆಗಿಂತ ಪರಿಸರದಲ್ಲಿ ಇಳಿದು ಕೆಲಸ ನಿರ್ವಹಿಸುವದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಸೀಕೋ ಸಂಸ್ಥೆಯ ಕಾರ್ಯಕರ್ತ ಡಾ. ಚೇತನ್, ಕುಮಾರಿ ಲಾವಣ್ಯ,, ಗಣೇಶ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಘಟಕದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ನಾಕೂರು-ಶಿರಂಗಾಲ ಗ್ರಾ.ಪಂ. ಸದಸ್ಯ ಚಂದ್ರಶೇಖರ್, ಹಿರಿಯರಾದ ನೀಲಮ್ಮ ಪೆಮ್ಮಯ್ಯ, ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ.ಜಿ. ಪ್ರೇಮ್ ಕುಮಾರ್, ಮುಖ್ಯ ಶಿಕ್ಷಕ ಎಂ.ವಿ. ಮಂಜೇಶ್, ಸಹ ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ಮಕ್ಕಳು, ಅಡುಗೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
*ಗೋಣಿಕೊಪ್ಪ: ಮಂಗಳೂರು ವಿಶ್ವವಿದ್ಯಾನಿಲಯದ 2018-19 ನೇ ಸಾಲಿನ ಶೈಕ್ಷಣಿಕ ಮಂಡಳಿಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿನಿ ಎಂ.ಬಿ. ಚೋಂದಮ್ಮ ಆಯ್ಕೆಯಾಗಿದ್ದಾರೆ.
ವಿಶ್ವವಿದ್ಯಾನಿಲಯ ಎನ್.ಸಿ.ಸಿ.ಗೆ ಸಂಬಂಧಿಸಿದಂತೆ ಯಾವದೇ ವಿಚಾರವಿದ್ದರೂ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಸೇರಿ ಚರ್ಚಿಸುವ ಅವಕಾಶ ಇವರಿಗಿರುತ್ತದೆ.
ಈಕೆ ವಿವಿಧ ರಾಜ್ಯಗಳಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತ ಶಿಬಿರ, ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ, ತಲ್ ಸೈನಿಕ್ ಶಿಬಿರ ಮುಂತಾದ ಶಿಬಿರಗಳಲ್ಲಿ ಭಾಗವಹಿಸುವದರೊಂದಿಗೆ ಎನ್.ಸಿ.ಸಿ.ಯಲ್ಲಿ ನಡೆಸಲಾಗುವ ಎ. ಬಿ. ಮತ್ತು ಸಿ. ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾಗಿರುತ್ತಾರೆ.
ಎನ್.ಸಿ.ಸಿ.ಯಲ್ಲಿ ಸೀನಿಯರ್ ಅಂಡರ್ ಆಫೀಸರ್ ರ್ಯಾಂಕ್ ಪಡೆಯುವದರೊಂದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಮುಂದಿರುವ ಈ ವಿದ್ಯಾರ್ಥಿನಿ ಪ್ರಸಕ್ತ ತೃತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದ ಮಾನೀರ ಬಿದ್ದಪ್ಪ ಮತ್ತು ಕಲ್ಪನ ದಂಪತಿಗಳ ಪುತ್ರಿ.
ಮಡಿಕೇರಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ತಾ. 16 ರಂದು ಬೆಳಿಗ್ಗೆ 9.30 ಕ್ಕೆ ಭಾರತೀಯ ವಿದ್ಯಾಭವನದಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮಡಿಕೇರಿಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಪ್ರಕಟಣೆ ಕೋರಿದೆ.
ಸ್ಪರ್ಧಾ ವಿವರ: ವಿಭಾಗ 1 ರಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿಭಾಗ 2 ರಲ್ಲಿ 1ನೇ ಮತ್ತು 2ನೇ ತರಗತಿ, ವಿಭಾಗ 3 ರಲ್ಲಿ 3ನೇ ಮತ್ತು 4ನೇ ತರಗತಿ, ವಿಭಾಗ 4 ರಲ್ಲಿ 5 ರಿಂದ 7ನೇ ತರಗತಿವರೆಗೆ, ವಿಭಾಗ 5 ರಲ್ಲಿ 8 ರಿಂದ 10ನೇ ತರಗತಿವರೆಗೆ.
ಪೇಂಟಿಂಗ್, ಡ್ರಾಯಿಂಗ್ ಹಾಳೆಯನ್ನು ವಿತರಿಸಲಾಗುವದು. ಉಳಿದ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕಿದೆ. ವಿವಿರಗಳಿಗೆ ಆಶಲತಾ ಧರ್ಮಪಾಲ್, ಅ�??