ಬೆಂಗಳೂರು, ಡಿ.8: ಡಾ. ಕಸ್ತೂರಿ ರಂಗನ್ ವರದಿಯಲ್ಲಿರುವ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರವು ಅಸಮ್ಮತಿ ಸೂಚಿಸಿದೆ. ರಾಜ್ಯ ಅರಣ್ಯ ಸಚಿವ ಆರ್. ಶಂಕರ್ ಅವರು ಈ ಬಗ್ಗೆ ‘ಶಕ್ತಿ’ಗೆ ಖಾತರಿಪಡಿಸಿದ್ದಾರೆ. ವರದಿ ಜಾರಿ ವಿರುದ್ಧ ಮಲೆನಾಡು ಮತ್ತು ಪಶ್ಚಿಮಘಟ್ಟ ವಿಭಾಗದ ಬಹುತೇಕ ಜನರು ಆಕ್ರೋಷ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ನಿಲುವು ತೆಗೆದುಕೊಂಡಿದೆ. ಕೇಂದ್ರ ಸರಕಾರವು ನಾಲ್ಕನೇ ಬಾರಿಗೆ ಅಧಿಸೂಚನೆ ಹೊರಡಿಸಿ ವರದಿಯನ್ನು ಜಾರಿಗೊಳಿಸುವ ಕುರಿತು ರಾಜ್ಯ ಸರಕಾರದ ಅನುಮೋದನೆಯನ್ನು ಕೇಳಿದೆ.

ಆದರೆ ರಾಜ್ಯ ಸರಕಾರವು ಸಚಿವ ಶಂಕರ್ ಅವರ ಅಧ್ಯಕ್ಷತೆಯಲ್ಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಿದೆ. ಈ ಕುರಿತು ಮುಂದಿನ ಕಸ್ತೂರಿ ರಂಗನ್ ವರದಿಗೆ ರಾಜ್ಯದ ಅಸಮ್ಮತಿ

(ಮೊದಲ ಪುಟದಿಂದ) ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವದಾಗಿ ಸಚಿವರು ತಿಳಿಸಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ ಎಂದು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೂ ನಿರ್ಣಯ ಕೈ ಗೊಳ್ಳಲಾಗಿತ್ತು. ಇದೇ ನಿರ್ಣಯವನ್ನು ಈಗಿನ ಸಮ್ಮಿಶ್ರ ಸರಕಾರವು ಮುಂದುವರೆಸಲಿ ರುವದಾಗಿ ತಿಳಿದುಬಂದಿದೆ.