ಮಡಿಕೇರಿ, ಡಿ. 7: ಬೆಟ್ಟಗೇರಿ ಬಕ್ಕದ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪುದಿನೆರವನ ವಿಕ್ಕಿ ಮತ್ತು ಕೇಟೋಳಿ ಕೌಶಿಕ್ ಇವರುಗಳು ಈ ವರ್ಷದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಹಣ ಸಂಗ್ರಹಿಸಿ ಸಹಾಯ ಹಸ್ತ ನೀಡಿದ್ದಾರೆ.
ಬಕ್ಕ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಕಾಟಕೇರಿ ಗ್ರಾಮದ ಬಾರಿಕೆರ ಅಕ್ಕಮ್ಮ ಚಂದ್ರಶೇಖರ್, ಹೆರವನಾಡು ಗ್ರಾಮದ ಕೊಕ್ಕಲೆ ರುಕ್ಮಿಣಿ ಉತ್ತಪ್ಪ, ಗಾಳಿಬೀಡು ಗ್ರಾಮದ ಶೋಭಾ ವಿನಯ್ ಮತ್ತು ಮದೆನಾಡು ಗ್ರಾಮದ ಶಂಕರ ಪ್ರೇಮಲತಾ ಈ ನಾಲ್ಕು ಕುಟುಂಬಕ್ಕೆ ತಲಾ ರೂ. 5,100 ಧನ ಸಹಾಯ ನೀಡಿ ಸಾಂತ್ವನ ಹೇಳಲಾಯಿತು.