ಕೂಡಿಗೆ, ಡಿ. 6: ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಸಹಕಾರ ಸಂಘದ ಆವರಣದಲ್ಲಿ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಜೆ.ಪರಮೇಶ್ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಹೆಚ್.ಜೆ. ಪರಮೇಶ್ ಹಾಗೂ ಹೆಚ್.ಟಿ. ದಿನೇಶ್ ನಾಮ ಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಹೆಚ್.ಜೆ. ಪರಮೇಶ್ ಅವರಿಗೆ ಎಂಟು ಮತಗಳು ಹಾಗೂ ಹೆಚ್.ಟಿ. ದಿನೇಶ್ ಅವರು ನಾಲ್ಕು ಮತಗಳನ್ನು ಪಡೆದಿದ್ದು, ಅಧ್ಯಕ್ಷರಾಗಿ ಹೆಚ್.ಜೆ. ಪರಮೇಶ್ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ, ಉಪಾಧ್ಯಕ್ಷರಾಗಿ ಕವಿತಾರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಅಧಿಕಾರಿ (ಸಿ.ಡಿ.ಓ) ಮೋಹನ್ ಹಾಗೂ ತೊರೆನೂರು ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಜೀವನ್ ಕಾರ್ಯನಿರ್ವಹಿಸಿದರು.