ಕುಶಾಲನಗರ, ಡಿ. 6: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಕುಶಾಲನಗರದಲ್ಲಿ ತಾ. 9 ರಂದು ಸಾರ್ವಜನಿಕ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಕುಶಾಲನಗರ ವಾಸವಿ ಯುವಜನ ಸಂಘ ಆಶ್ರಯದಲ್ಲಿ ನಡೆಯಲಿರುವ 5ನೇ ವರ್ಷದ ರಂಗೋಲಿ ಸ್ಪರ್ಧೆಯಲ್ಲಿ 75 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುವದು ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಕೆ.ಎನ್. ನಾಗಪ್ರವೀಣ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಾಗಪ್ರವೀಣ್, ಡಿ 9 ರಂದು ಸಂಜೆ 4 ಗಂಟೆಗೆ ರಥಬೀದಿಯಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಮೊದಲು ಬಂದ 75 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು ಯಾವದೇ ಪ್ರವೇಶ ಶುಲ್ಕ ಇರುವದಿಲ್ಲ. ಪ್ರಥಮ ಬಹುಮಾನ ರೂ. 2222 ನಗದು, 1 ಗ್ರಾಂ ಚಿನ್ನದ ನಾಣ್ಯ, ಆಷರ್ಕಕ ಟ್ರೋಫಿ, ದ್ವಿತೀಯ ಬಹುಮಾನ ರೂ. 1111 ನಗದು, ಅರ್ಧ ಗ್ರಾಂ ಚಿನ್ನದ ನಾಣ್ಯ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿಪತ್ರ ಹಾಗೂ ನೆನಪಿನ ಕಾಣಿಕೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಓರ್ವ ಅದೃಷ್ಟ ವ್ಯಕ್ತಿಗೆ 1 ಗ್ರಾಂ ಚಿನ್ನದ ನಾಣ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844521852 ಅಥವಾ 9060660906 ಸಂಪರ್ಕಿಸುವಂತೆ ಕೋರಿದ್ದಾರೆ.

ಉದ್ಘಾಟನಾ ಸಮಾರಂಭ 4 ಗಂಟೆಗೆ ನಡೆಯಲಿದ್ದು ಸಮಾರೋಪ ಸಮಾರಂಭ ಸಂಜೆ 6 ಗಂಟೆಗೆ ಜರುಗಲಿದೆ ಎಂದು ತಿಳಿಸಿದ ಸಂಘದ ಉಪಾಧ್ಯಕ್ಷರಾದ ವೈಶಾಖ್, ರಥಬೀದಿಯ ಎಲ್ಲಾ ಉದ್ಯಮಿಗಳ ಸಹಯೋಗದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ, ಮಹಿಳಾ ಮಂಡಳಿ, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ, ವಾಸವಿ ಯುವತಿಯರ ಸಂಘ, ಬಾಲಕರ ಸಂಘ ಮತ್ತು ಬಾಲಕಿಯರ ಸಂಘ ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಎಲ್.ಸತ್ಯನಾರಾಯಣ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉದ್ಯಮಿಗಳಾದ ಎಸ್.ಕೆ. ಸತೀಶ್, ಎಸ್‍ಎಲ್‍ಎನ್ ವಿಶ್ವನಾಥನ್, ವಿ.ವಿ.ತಿಲಕ್ ಮತ್ತು ಕಿರುತೆರೆ ಧಾರವಾಹಿ ನಿರ್ಮಾಪಕ ಉಮಾಶಂಕರ್ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ.ಪ್ರವೀಣ್, ಸಹಕಾರ್ಯದರ್ಶಿ ಆದರ್ಶ್, ಕಾರ್ಯಕ್ರಮ ನಿರ್ದೇಶಕ ಬಾಲಾಜಿ ಇದ್ದರು.