ಮಡಿಕೇರಿ, ನ. 22: ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ಬಾಲೆ ಗ್ರಾಮದ ಬಾಲಾಜಿನಾಯಕ (35) ಎಂಬವರು ತಾ. 5 ರಂದು ತಾವು ಕೆಲಸ ಮಾಡುತ್ತಿರುವ ಶಿರಂಗಾಲದ ಫಾಸ್ಟ್ಫುಡ್ ಅಂಗಡಿಗೆಂದು ತೆರಳಿದವರು ಇನ್ನೂ ಆಗಮಿಸಿಲ್ಲ ಎಂದು ಅವರ ಪತ್ನಿ ಜಿ.ಎಂ. ರೇಣುಕಾಬಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ (08276-278433, 08272-229000) ಕೋರಲಾಗಿದೆ.