ಗೆಣಸು ಕದ್ದೊಯ್ದ ಪುಂಡರು

ಗೋಣಿಕೊಪ್ಪಲು, ನ. 22: ಇಲ್ಲಿಗೆ ಸಮೀಪ ಅರುವತ್ತೊಕ್ಕಲು ಗ್ರಾಮದ ಪತ್ರಕರ್ತ ಪಿಲಿಫೋಸ್ ಮ್ಯಾಥ್ಯು ಮನೆಯ ಆವರಣಕ್ಕೆ ತಾ.21ರ ರಾತ್ರಿ ಅಕ್ರಮವಾಗಿ ಪ್ರವೇಶಿಸಿ ದ್ವಿಚಕ್ರವಾಹನ ಕದ್ದೊಯ್ಯಲು ವಿಫಲ ಯತ್ನ ಹಾಗೂ ಹಿತ್ತಲಲ್ಲಿ ಬೆಳೆದಿದ್ದ ಮರಗೆಣಸು ಗಿಡಗಳನ್ನು ಕಿತ್ತು ಗೆಣಸನ್ನು ಕದ್ದೊಯ್ದ ಘಟನೆ ನಡೆದಿದೆ.

ಕುಟುಂಬ ವರ್ಗ ನಿದ್ರೆಯಲ್ಲಿದ್ದ ಸಂದರ್ಭ ರಾತ್ರಿ 12 ಗಂಟೆ ಸುಮಾರಿಗೆ ಕೃತ್ಯ ನಡೆದಿರಬಹುದು ಎಂದು ಅಂದಾಜಿಸಲಾಗಿದೆ..

ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮ್ಯಾಥ್ಯು ಅವರು ಎಚ್ಚರವಾಗಿ ಮನೆಯ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಕೂಟರ್ ಕಳವಿಗೆ ವಿಫಲ ಯತ್ನ ಮಾಡಲಾಗಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಪಿಲಿಫೋಸ್ ಮ್ಯಾಥ್ಯು ಅರವತ್ತೊಕ್ಲು ಗ್ರಾಮದಲ್ಲಿ ಗಾಂಜಾ ದಂಧೆ ಬಗ್ಗೆ ಇತ್ತೀಚೆಗೆ ಪೊಲೀಸರಿಗೆ ದೂರಿದ್ದು, ಇಂತಹವರ ಕೃತ್ಯ ಇದಾಗಿರಬಹುದೆಂದು ಶಂಕಿಸಲಾಗಿದೆ.