ಮಡಿಕೇರಿ, ನ. 22: ಭಾರತೀಯ ವಾಯುಪಡೆಯ, ಗ್ರೂಪ್ ‘ವೈ’ (ಐಎಎಫ್(ಎಸ್) ಟ್ರೇಡ್‍ನಲ್ಲಿ ಏರ್‍ಮೆನ್‍ರನ್ನು ಆಯ್ಕೆ ಮಾಡುವದಕ್ಕೆ ಸಂಬಂಧಿಸಿದಂತೆ ಮೈಸೂರು ನಜರ್‍ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳಿಗೆ ಡಿ. 5 ರಂದು ದೇಹದಾಢ್ರ್ಯತೆ, ಲಿಖಿತ ಪರೀಕ್ಷೆ ನಡೆಯಲಿದೆ.
ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ (ಮಂಗಳೂರು), ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಿಗೆ ಡಿ. 7 ರಂದು ದೇಹದಾಢ್ರ್ಯತೆ, ಲಿಖಿತ ಪರೀಕ್ಷೆ ನಡೆಯಲಿದೆ.
ಡಿ. 5 ರಂದು ಮತ್ತು 7 ರಂದು ನಡೆಯುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತ ಅಭ್ಯರ್ಥಿಗಳು ನಂತರದ ದಿನದಂದು ಉಳಿದ ಆಯ್ಕೆ ಪ್ರಕ್ರಿಯೆಗಾಗಿ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಿರಬೇಕು.
ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ನಾಗರಿಕರಾಗಿರುವಂಥ ಅಥವಾ ಕರ್ನಾಟಕ ರಾಜ್ಯದಲ್ಲಿ ಪಿಯುಸಿ, ಇಂಟರ್ ಮೀಡಿಯೇಟ್ ಪೂರ್ಣಗೊಳಿಸಿರುವಂತ ಅವಿ ವಾಹಿತ ಪುರುಷರು ಮಾತ್ರ ಅರ್ಹರಾಗಿರುತ್ತಾರೆ. ಅಭ್ಯರ್ಥಿಯು 1998ರ ಜುಲೈ 14 ರಿಂದ 2002ರ ಜೂನ್ 26 ರೊಳಗೆ ಜನಿಸಿದವರಾಗಿ ರಬೇಕು.
ಕನಿಷ್ಟ ಎತ್ತರ 152.5 ಸೆಂ.ಮೀ.ಗಳು. ವಿದ್ಯಾರ್ಹತೆ ಪಿ.ಯುಸಿ /10+2, ಇಂಟರ್ ಮೀಡಿಯೇಟ್, ಮಾಧ್ಯಮಿಕ ಶಿಕ್ಷಣ ಮಂಡಳಿಗಳ ಸಮಿತಿಯು ಅನುಮೋದಿಸಿರುವ ಸಮಾನ ಪರೀಕ್ಷೆಯನ್ನು ಯಾವದೇ ವಿಭಾಗ, ವಿಷಯಗಳಲ್ಲಿ ಸರಾಸರಿ ಕನಿಷ್ಟ ಶೇ. 50 ರಷ್ಟು ಅಂಕಗಳು ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ಶೇ. 50 ರಷ್ಟು ಅಂಕಗಳೊಂದಿಗೆ ಉತ್ತೀರ್ಣ ರಾಗಿರಬೇಕು.
ಅರ್ಹ ಅಭ್ಯರ್ಥಿಗಳು ಡಿ. 5 ಮತ್ತು 7 ರಂದು 9 ಗಂಟೆಗೆ ಮೊದಲು ಅಂಕ ಪಟ್ಟಿಯ ಮೂಲಪ್ರತಿ ಮತ್ತು ಮೆಟ್ರಿಕ್ಯುಲೇಷನ್, ಇಂಟರ್ ಮೀಡಿಯೇಟ್, ಪಿ.ಯು.ಸಿ. ಉತ್ತೀರ್ಣ ಪ್ರಮಾಣ ಪತ್ರ ಮತ್ತು ಎಲ್ಲಾ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ 4 ನಕಲು ಪ್ರತಿಗಳು, ವಾಸಸ್ಥಳದ ಪ್ರಮಾಣ ಪತ್ರ (ಬೇರೆ ಕಡೆ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ) ಮತ್ತು 8 ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಬಣ್ಣದ ಭಾವಚಿತ್ರ ಗಳೊಂದಿಗೆ ರ್ಯಾಲಿ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು.
ಹೆಚ್ಚಿನ ವಿವರಗಳಿಗೆ ಭಾರತೀಯ ವಾಯುಪಡೆಯ ಜಾಲತಾಣವಾದ ತಿತಿತಿ.ಚಿiಡಿmeಟಿseಟeಛಿಣioಟಿ.ಛಿಜಚಿಛಿ.iಟಿ ಗೆ ಲಾಗ್‍ಆನ್ ಮಾಡುವದು ಅಥವಾ 07 ಏರ್ ಮೆನ್ ಆಯ್ಕೆ ಕೇಂದ್ರ, ಸಂ.1, ಕಬ್ಬನ್ ರಸ್ತೆ, ಬೆಂಗಳೂರು-560001, ದೂ.ಸಂ : 08025592199, ಇ-ಮೇಲ್ : ಛಿo.7ಚಿsಛಿ-ಞಚಿ@gov.iಟಿ ಅನ್ನು ಸಂಪರ್ಕಿಸುವುದು. ಅಭ್ಯರ್ಥಿಗಳು ಹತ್ತಿರದ ಜಿಲ್ಲಾ ಉದ್ಯೋಗ ಅಧಿಕಾರಿಯವರನ್ನು ಸಂಪರ್ಕಿ ಸಬಹುದು.