ನಾಪೆÉÇೀಕ್ಲು, ನ. 22: ಜಿಲ್ಲೆಯ ರೈತರು ಏಕಬೆಳೆ ಬೆಳೆಯುವ ಬದಲು ಲಾಭದಾಯಕವಾದ ಮಿಶ್ರ ಬೆಳೆಯನ್ನು ಬೆಳೆಯುವದರ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್ ಹೇಳಿದರು. ಅವರು ಕೊಡಗು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮಡಿಕೇರಿ ತಾಲೂಕು, ಮತ್ತು ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್ ನಾಪೆÉÇೀಕ್ಲು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ 2018-19 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಜನರು ಕೃಷಿಯನ್ನು ಅವಲಂಭಿಸಿ ಜೀವನ ಸಾಗಿಸುತ್ತಿದ್ದು ಕಳೆದ ಭಾರಿ ಮಳೆಯಿಂದ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಸರಕಾರ ರೈತರಿಗೆ ಸಬ್ಸಿಡಿ ರೂಪದಲ್ಲಿ ಗೊಬ್ಬರ ಪರಿಕರಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕೆಂದು ಈ ಸಂದರ್ಭ ಅವರು ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರುಂಬಮ್ಮಯ್ಯ ಮಾತನಾಡಿ ರೈತರು ಸರಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಈಗಾಗಲೇ ಸರಕಾರ ಗ್ರಾಮೀಣ ಪ್ರದೇಶ ರೈತರಿಗೆ ಕೃಷಿ ಹೊಂಡ ನಿರ್ಮಾಣ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆಗೆ ಅವಕಾಶವನ್ನು ಕಲ್ಪಿಸಿದ್ದು ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಕೋರಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಸುಸ್ತಿರ ಕೃಷಿಯತ್ತ ಕೃಷಿ ಅರಣ್ಯಗಳ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಕೀಟ ಶಾಸ್ತ್ರಜ್ಞರು ಆದ ಡಾ, ವೀರೇಂದ್ರ ಕುಮಾರ್ ಬೆಳೆಗಳಿಗೆ ಬೀಳುವ ಕೀಟ ಮತ್ತು ರೋಗ ನಿರ್ವಹಣೆ ಮತ್ತು ಸುರಕ್ಷಣೆ ಬಗ್ಗೆ ಸೇರಿದ್ದ ಬೆಳೆಗಾರರಿಗೆ ಮಾಹಿತಿ ನೀಡಿದರು.
ಕೃಷಿ ನಿರ್ದೇಶಕ ರಾಜಶೇಖರ್ ಪಾಸ್ತಾವಿಕವಾಗಿ ಮಾತನಾಡಿ ಇಲಾಖೆಯಲ್ಲಿ ರೈತರಿಗೆ ಸರಕಾರದಿಂದ ನೀಡುತ್ತಿರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ರೈತ ಕೃಷಿ ಗೀತೆಯ ಹಾಡು ಉಳುವ ಜೋಗಿಯ ನೋಡಲ್ಲಿ ಗೀತೆಗೆ ಮಕ್ಕಳ ನೃತ್ಯದ ಹೆಜ್ಜೆ ಹಳೆಯ ಕಾಲದ ರೈತಾವಳಿಯನ್ನು ನೆನಪಿಸುವಂತಿತ್ತು.
ಈ ಸಂದರ್ಭ ವಿವಿಧ ಇಲಾಖೆಗಳ ಪರಿಕರಗಳ ವಸ್ತು ಪ್ರದರ್ಶನವನ್ನು ಏರ್ಪಾಡಿಸ ಲಾಗಿತ್ತು. ವಿವಿಧ ಇಲಾಖೆಗಳಾದ ತೋಟಗಾರಿಕೆ, ಕೃಷಿ ಇಲಾಖೆ ಅರಣ್ಯ, ಮೀನುಗಾರಿಕೆ, ಓಮೇಗಾ, ಮಂಗಳೂರು ಗೊಬ್ಬರ ಇಲಾಖೆ ಮತ್ತಿತರು 10ಕ್ಕೂ ಅಧಿಕ ಇಲಾಖೆಯವರು ಇದರಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ತಾ, ಪಂಚಾಯತ್ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ. ತಾ.ಪಂ. ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೃಷಿ ಪತ್ತಿನ ಸಂಘದ ಮತ್ತು ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಎ.ಪಿ.ಎಂ.ಸಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಮತ್ತಿತರರು ಇದ್ದರು.
ಕೆಲೇಟೀರ ನಾಣಯ್ಯ ಮತ್ತು ಚಿತ್ರ ನಾಣಯ್ಯ ಪ್ರಾರ್ಥಸಿ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟೀರ ಸಿ. ಗಿರೀಶ್ ನಿರೂಪಿಸಿ, ಸ್ವಾಗತಿಸಿದರು, ನಾಪೆÉÇೀಕ್ಲು ಕೃಷಿ ಅಧಿಕಾರಿ ಎಂ.ಕೆ. ಜಯರಾಮ್ ವಂದಿಸಿದರು.