ಮಡಿಕೇರಿ, ನ. 22: ಖಾಸಗಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ಗಳ ಸುಗಮ ಸಂಚಾರಕ್ಕಾಗಿ ರಾಜಾಸೀಟು ರಸ್ತೆಯ ಕೆಲವು ಪ್ರಮುಖ ಸ್ಥಳಗಳಲ್ಲಿ ರಸ್ತೆಯನ್ನು ಅಗಲೀಕರಣ ಮಾಡಲು ಈಗಾಗಲೇ ನಿರ್ಧಾರ ಕೈಗೊಂಡಿದೆ. ಅಲ್ಲದೆ ಹಾಕಿ ಕ್ರೀಡಾಂಗಣದವರೆಗೆ ರಸ್ತೆ ದುರಸ್ತಿ ಕೈಗೊಳ್ಳಲು ನಿರ್ಧರಿಸಿವೆ.ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ನಿಯಮಾನುಸಾರ ಅಳತೆ ಮಾಡಿ ಮಾರ್ಕಿಂಗ್ ಮಾಡಲು ತಾ. 23ರಂದು (ಇಂದಿನಿಂದ) ಕೆಲಸ ನಿರ್ವಹಿಸಲಾಗುತ್ತದೆ ಎಂದು ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ‘ಶಕ್ತಿ‘ಗೆ ತಿಳಿಸಿದ್ದಾರೆ. ಈ ಸಂದರ್ಭ ನಗರಸಭಾ ಆಯುಕ್ತರು ಮತ್ತು ಸಂಬಂಧಿತ ಇಂಜಿನಿಯರ್ ಕೂಡ ಹಾಜರಿರುವದಾಗಿ ಅವರು ತಿಳಿಸಿದ್ದಾರೆ.