ಮಡಿಕೇರಿ, ನ. 21: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದ ಸಂಸ್ಕøತ ಧಾರ್ಮಿಕ ಪಠಣ ಸ್ಪರ್ಧೆ ಯಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಂ.ಕೆ. ಶ್ರೀವತ್ಸ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾನೆ. ಈತ ಚೇರಂಬಾಣೆಯ ಅರುಣ ಪದವಿ ಪೂರ್ವ ವಿದ್ಯಾಲಯದ ಹಿಂದಿ ಅಧ್ಯಾಪಕ ಎಂ.ಎಸ್. ಕೃಷ್ಣಮೂರ್ತಿ ಹಾಗೂ ಕೊಳಗದಾಳು ಶಾಲೆಯ ಶಿಕ್ಷಕಿ ಎಂ.ಎಸ್. ಪರಿಮಳ ಇವರ ಪುತ್ರ.