ಶನಿವಾರಸಂತೆಯ ಶಾಹಿನಾ ಪ್ರಿಂಟಿಂಗ್ ಪ್ರೆಸ್ ಮಾಲೀಕ ಕೆ.ಎಂ. ಅಮೀರ್ ಅವರ ಪತ್ನಿ ಮ್‍ತ್ತಾಜ್ ಬೇಗಂ (70) ತಾ. 21 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮ್‍ತ್ತಾಜ್ ಬೇಗಂ ಅವರ ನಿಧನದ ಹಿನ್ನೆಲೆ ನಗರದ ಜಾಮಿಯ ಮಸೀದಿಯಲ್ಲಿ ನಡೆಯಬೇಕಿದ್ದ ಈದ್ ಮಿಲಾದ್ ವಿಶೇಷ ಪ್ರಾರ್ಥನೆಯನ್ನು ಮುಂದೂಡಲಾಯಿತು.

ಟಕೊಡ್ಲಿಪೇಟೆಯ ನಿವೃತ್ತ ಪೋಸ್ಟ್ ಮಾಸ್ಟರ್ ಸುರೇಶ್ (65) ಅವರು ತಾ. 20 ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಹಾಗೂ ಮಡಿಕೇರಿಯ ಕ್ಲಿನಿಕಲ್ ಲ್ಯಾಬ್ ಮಾಲೀಕ ಪ್ರದೀಪ್ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಟಕರಿಕೆ ಗ್ರಾಮದ ಚೆತ್ತುಕಾಯ ಗ್ರಾಮ ನಿವಾಸಿ ಹೊದ್ದೆಟ್ಟಿ ಶಿವರಾಯ (57) ಅವರು ತಾ. 21 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 22 ರಂದು (ಇಂದು) ಮೃತರ ಸ್ವಗೃಹದಲ್ಲಿ ನೆರವೇರಲಿದೆ. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.