ಗೋಣಿಕೊಪ್ಪಲು. ನ. 20: ಕೊಡಗಿನ ರೈತರು,ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಇದೀಗ ಸ್ವಾತಂತ್ರ್ಯ ಪೂರ್ವದಿಂದಲೂ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾಫಿ ಬೆಳೆಗಾರರ ಮೇಲೆ ಅರಣ್ಯ ಇಲಾಖಾಧಿಕಾರಿಗಳ ವಕ್ರದೃಷ್ಟಿ ಬೀರಿದ್ದು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸಲು ನೋಟಿಸು ಜಾರಿ ಮಾಡಿದ್ದಾರೆ. ನೋಟಿಸ್ನಿಂದ ವಿಚಲಿತರಾದ ಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಸೊಡ್ಲೂರು ಸುತ್ತ ಮುತ್ತ ಗ್ರಾಮದ 50ಕ್ಕೂ ಅಧಿಕ ಕಾಫಿ ಬೆಳೆಗಾರರು ಜೆಡಿಎಸ್ ಪ್ರಮುಖ ಸಂಕೇತ್ ಪೂವಯ್ಯನವರನ್ನು ಭೇಟಿ ಮಾಡುವ ಮೂಲಕ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.ಸಂಕೇತ್ ಪೂವಯ್ಯ ಅವರನ್ನು ಭೇಟಿ ಮಾಡಿದ ಹೈಸೊಡ್ಲೂರುವಿನ ಕಾಫಿ ಬೆಳೆಗಾರರು ಅರಣ್ಯಾಧಿಕಾರಿ ನೀಡುತ್ತಿರುವ ಕಿರುಕುಳದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ನಂತರ ವೀರಾಜಪೇಟೆಯ ಡಿಎಫ್ಒ ಮರಿಯಾ ಕೃಸ್ತರಾಜ್ ಅವರನ್ನು ಭೇಟಿ ಮಾಡಿದ ತಂಡ ಅಧಿಕಾರಿಯ ಮುಂದೆ ಸಮಗ್ರ ವಿಷಯದ ಬಗ್ಗೆ ಚರ್ಚೆ ನಡೆಸಿ ಕಾಫಿ ಬೆಳೆಗಾರರಿಗೆ, ಕಾರ್ಮಿಕರಿಗೆ ತೊಂದರೆ ನೀಡದಂತೆ ಹಾಗೂ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸದಂತೆ ಮನವಿ ಪತ್ರ ಸಲ್ಲಿಸಿತು.1941ನೇ ಇಸವಿಯಿಂದಲೂ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ 50ಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿಯಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಇರುವ 230 ಎಕರೆ ಭೂಮಿಯು ಪ್ರಸ್ತುತ ರೈತರ ಸ್ವಾಧೀನದಲ್ಲಿದೆ.ಕುರುಬರ ಬೋಜ, ರಾಜು,ಮರಿ, ಹಾಗೂ ಇನ್ನಿತರ ಪರಿಶಿಷ್ಟರ ಕುಟುಂಬಗಳು ಈ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ಲಭಿಸಿದ್ದರೂ ತಿತಿಮತಿ ಉಪವಿಭಾಗದ ಅರಣ್ಯಾಧಿಕಾರಿಗಳು ದಿನಾಂಕ 15.10.2018ರಂದು ಕುರುಬರ ಬೋಜ, ರಾಜು,ಮರಿ, ಎಂಬವರಿಗೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ನೋಟಿಸು ಜಾರಿ ಮಾಡಿದ್ದರು. ಇದರಿಂದ ಕಂಗಲಾದ ಈ ಭಾಗದ ಕಾಫಿ ಬೆಳೆಗಾರರು ಒಟ್ಟಾಗಿ ಈ ಆದೇಶದ ವಿರುದ್ಧ ಧ್ವನಿ ಎತ್ತಿದ್ದಾರೆ.
ಕರ್ನಾಟಕ ಅರಣ್ಯ ಕಾಯಿದೆ 1963 ನಿಯಮ 24(ಸಿ)ಯ ಪ್ರಕಾರ ದಿ. 18.02.2002ರಲ್ಲಿ ಮೊಕದ್ದಮ್ಮೆ 50/2002-03ಸದರಿ ಜಾಗದಲ್ಲಿ ವಾಸವಿದ್ದ ಕುರುಬರ ಬೋಜ, ರಾಜು, ಮರಿ,
(ಮೊದಲ ಪುಟದಿಂದ) ಅವರಗಳ ಮೇಲೆ ಕೇಸು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದ ಸರ್ವೆ ನಂ1/1ನಲ್ಲಿರುವ 230 ಏಕ್ರೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಇರುವವರಿಗೆ ಮುಂದೆ ನೋಟಿಸು ಜಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮಸ್ಥರು ಒಟ್ಟಾಗಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆಯ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಒತ್ತುವರಿ ಜಮೀನಿನ ಕಾಗದ ಪತ್ರಗಳನ್ನು ಸಲ್ಲಿಸಿದರು.