ವೀರಾಜಪೇಟೆ, ನ. 19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಿನ್ನೆ ಸಂಜೆ ಮಾರುತಿ ಓಮ್ನಿ ಹಾಗೂ ಖಾಸಗಿ ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ವ್ಯಾನ್‍ನ ಮುಂದಿನ ಭಾಗ ಪೂರ್ಣವಾಗಿ ಜಖಂಗೊಂಡಿದ್ದು ವ್ಯಾನ್‍ನ ಚಾಲಕ ಯೋಗೀಶ್‍ನ ಎಡದ ಕಾಲು ಮುರಿದಿದ್ದು ಚಿಕಿತ್ಸೆಗಾಗಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಸೇರಿಸಲಾಗಿದೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಸ್ಸಿನ ಚಾಲಕ ವಿಠಲ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಮಾರುತಿ ಓಮ್ನಿ ವ್ಯಾನ್ ಹೆಗ್ಗಳದಿಂದ ವೀರಾಜಪೇಟೆಗೆ ಬರುತ್ತಿದ್ದು, ಬಸ್ ಹೆಗ್ಗಳದ ಕಡೆಗೆ ಹೋಗುತ್ತಿದ್ದಾಗ ಎರಡು ವಾಹನಗಳ ನಡುವೆ ಮುಖಾ ಮುಖಿ ಡಿಕ್ಕಿಯಾಗಿತ್ತು.