ಗೋಣಿಕೊಪ್ಪ ವರದಿ, ನ. 19 : ಪೆರುಂಬಾಡಿಯ ಮನೆಯಲ್ಲಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಗೋಣಿಕೊಪ್ಪದ ಶರತ್ ಹಾಗೂ ಭಾವ ಎಂಬುವವರು ರಕ್ಷಿಸಿದ್ದಾರೆ.
ಅಲ್ಲಿನ ಶಿವದಾಸ್ ಎಂಬವರ ಮನೆಯ ಒಳಗೆ ಸೇರಿಕೊಂಡು ಆತಂಕ ಮೂಡಿಸಿದ್ದ ಕಾಳಿಂಗನನ್ನು ಹಿಡಿದು ಗೋಣಿಕೊಪ್ಪ ಪ್ರೌಡಶಾಲಾ ಮೈದಾನದಲ್ಲಿ ಸಾರ್ವಜನಿಕ ಪ್ರದರ್ಶನ ನೀಡಿದರು. ಹಾವು ಸುಮಾರು 12 ಕೆ.ಜಿ. ತೂಕವಿದ್ದು, 15 ಅಡಿ ಉದ್ದವಿದೆ.
-ಸುದ್ದಿಪುತ್ರ