ಮಡಿಕೇರಿ, ನ. 19: ಮಡಿಕೇರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಖಾಸಗಿ ಬಸ್ ನಿಲ್ದಾಣ ಚಾಲನೆಗೊಳ್ಳಬೇಕಾದರೆ ರಾಜಾಸೀಟು ರಸ್ತೆ ಹಲವೆಡೆ ಅಗಲೀಕರಣಗೊಳ್ಳಬೇಕಿದೆ. ಇನ್ನುಳಿದಂತೆ ರಸ್ತೆ ದುರಸ್ತಿ ಮಾಡಿ ಹಾಕಿ ಸ್ಟೇಡಿಯಂವರೆಗೂ ಡಾಮರೀಕರಣವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ನಗರಸಭಾ ಸಮಿತಿ ಸಭೆಯಲ್ಲಿ ಕಾಮಗಾರಿ ಅಂಗೀಕಾರಗೊಂಡಿದ್ದು ರೂ. 85 ಲಕ್ಷ ವೆಚ್ಚದಲ್ಲಿ ನಿರ್ವಹಿಸಲು ನಿರ್ಧರಿಸಲಾಗಿತ್ತು ಎಂದು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ “ಶಕ್ತಿ” ಗೆ ತಿಳಿಸಿದರು. ಆದರೆ, ಇಂದು ಕಾಮಗಾರಿ ಪ್ರಾರಂಭಕ್ಕೆ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ ಹೆಚ್. ಎಂ. ನಂದಕುಮಾರ್,ಪ್ರಕಾಶ್ ಆಚಾರ್ಯ, ಆಯುಕ್ತ ರಮೇಶ್ ಮೊದಲಾದವರು ತೆರಳಿ ಜೆಸಿಬಿಯಿಂದ ಚಾಲನೆ ಮಾಡುತ್ತಿದ್ದಂತೆ ಅಪಸ್ವರ ಕೇಳಿಬಂದಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ನಗರಸಭಾ ಉಪಾಧ್ಯಕ್ಷ
(ಮೊದಲ ಪುಟದಿಂದ) ಟಿ.ಎಸ್. ಪ್ರಕಾಶ್ ಹಾಗೂ ನಗರಸಭಾ ಸದಸ್ಯ ಪಿ.ಡಿ.ಪೊನ್ನಪ್ಪ ಅವರು ತಮಗೆ ಸ್ಥಳೀಯ ಕೆಲವು ನಿವಾಸಿಗಳಿಂದ ಆಕ್ಷೇಪಣೆ ದೊರೆತಿರುವದಾಗಿ ಅಭಿಪ್ರಾಯಪಟ್ಟರು. 5 ಅಡಿಯಷ್ಟು ವಿಸ್ತರಣೆ ಮಾಡಿದರೆ ಕೆಲವು ಮನೆಗಳಿಗೆ ಧಕ್ಕೆಯಾಗುವ ದರಿಂದ ತಡೆಗೋಡೆ ನಿರ್ಮಿಸಿಕೊಟ್ಟರೆ ಮಾತ್ರ ರಸ್ತೆ ವಿಸ್ತರಣೆಗೆ ಸಹಕರಿ ಸುವದಾಗಿ ತಿಳಿಸಿದರು. ಕಾಮಗಾರಿಗೆ ಚಾಲನೆÀಗೈಯ್ಯುವ ಮುನ್ನ ಈ ವಿಭಾಗದ ಸದಸ್ಯರಿಗೂ ತಿಳಿಸದೆ ಕೆಲವೇ ಮಂದಿ ಬಂದುದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಪರಸ್ಪÀರ ಮಾತಿನ ಚಕಮಕಿಯುಂಟಾಗಿ ಬಳಿಕ ಕಾಮಗಾರಿಯನ್ನು ಇಂದು ಸ್ಥಗಿತಗೊಳಿಸಲಾಯಿತು.
ಈ ಕುರಿತು ಬಳಿಕ “ಶಕ್ತಿ” ಯೊಂದಿಗೆ ಮಾತನಾಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಾನೊಬ್ಬ ಮಹಿಳೆಯಾಗಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಕೆಲವು ವಿರೋಧಿ ಸದಸ್ಯರು ಸದಾ ವಿರೋಧಿಸುತ್ತಿದ್ದಾರೆ. ಆದರೆ ಇದನ್ನು ಎದುರಿಸುವ ಸಾಮಥ್ರ್ಯ ತನಗಿದೆ ಎಂದು ಮುನ್ನೆಚ್ಚರಿಕೆಯಿತ್ತರು. ಅಲ್ಲದೆ ಮುಂದೆ ಕೆಲಸ ಕೈಗೊಳ್ಳುವಾಗ ಪೊಲೀಸ್ ರಕ್ಷಣೆ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಈ ನಡುವೆ ಪ್ರಕರಣದ ಕುರಿತು “ಶಕ್ತಿ” ಯೊಂದಿಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರು “ತಾನು ಇಂದು ಬೆಳಿಗ್ಗೆ ಕಚೇರಿಯಲ್ಲಿ ಕುಳಿತಿದ್ದರೂ ತನ್ನನ್ನು ಆಹ್ವಾನಿಸದೆ ನಿರ್ಲಕ್ಷ್ಯ ಮಾಡಿ ಬೇಕಾದವರು ಮಾತ್ರ ಸ್ಥಳಕ್ಕೆ ತೆರಳಿದ್ದಾರೆ. ಕೆಲವು ವಿಭಾಗಗಳಲ್ಲಿ ಮನೆಗಳಿರುವೆಡೆ ಕೇವಲ ಎರಡೂವರೆ ಅಡಿ ಮಾತ್ರ ವಿಸ್ತರಿಸುವ ಸಾಧ್ಯತೆಯಿದ್ದು 5 ಅಡಿ ಮಾಡಬೇಕಾದರೆ ಅಂತಹ ಮನೆಗಳಿಗೆ ತಡೆಗೋಡೆ ನಿರ್ಮಿಸಿಕೊಡುವದು ನಗರಸಭೆಯ ಕರ್ತವ್ಯವಾಗುತ್ತದೆ. ಇಲ್ಲದಿದ್ದಲ್ಲಿ ಮುಂದೆ ಮಳೆ ಬಿದ್ದಾಗ ಮನೆಗಳೇ ಕುಸಿದು ಬೀಳುವ ಆತಂಕವಿದ್ದು ತನ್ನ ವಿಭಾಗದ ಈ ಪ್ರದೇಶದಲ್ಲಿ ಮಳೆಯಿಂದ ಏನಾದರೂ ಅನಾಹುತಗಳಾದರೆ ತಾನೇ ನೇರ ಹೊಣೆ ಹೊರಬೇಕಾಗುತ್ತÀದೆ. ಇಂತಹ ಸಂದಿಗ್ಧತೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಯುಕ್ತ ರಮೇಶ್ ಅವರು ತಾನು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸುವದಾಗಿ “ಶಕ್ತಿ” ಯೊಂದಿಗೆ ತಿಳಿಸಿದರು.
ಅಧ್ಯಕ್ಷರ ನಿರ್ಧಾರ : ಈ ಎಲ್ಲ ಬೆಳವಣಿಗೆಗಳ ಬಳಿಕ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಸಂಜೆ ವೇಳೆ “ಶಕ್ತಿ” ಗೆ ಈ ಮಾಹಿತಿ ನೀಡಿದರು: ನಗರಸಭಾ ರಸ್ತೆಯ ತಾಂತ್ರಿಕ ನಿಯಾಮಾನುಸಾರ ಏನಿದೆಯೋ ಅದೇ ಕ್ರಮದಲ್ಲಿ ವಿಸ್ತರಣೆ ಮಾಡಲಾಗುತ್ತದೆ.ಇದಕ್ಕಾಗಿ ಮಂಗಳವಾರದಿಂದ ‘ಮಾರ್ಕಿಂಗ್’ ಮಾಡಲಾಗುತ್ತದೆ. ಯಾವ ಮನೆಗಳಿಗೂ ಧಕ್ಕೆಯಾಗದ ರೀತಿಯಲ್ಲಿ ಆಯಾ ಸ್ಥಳದ ಅಳತೆಗೆ ಅನುಸಾರವಾಗಿ ಅಗಲೀಕರಣ ಗೊಳಿಸಲಾಗುತ್ತದೆ. ಇದಕ್ಕಾಗಿ ಎರಡು ದಿನ ಗುರುತು ಮಾಡಲಾಗುತ್ತದೆ. ಬಳಿಕ ಸಂಬಂಧಿಸಿದ ಮನೆಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ಅದರಂತೆ ಯಾರಿಗೂ ತೊಂದರೆಯಾಗದ ಕ್ರಮದಲ್ಲಿ ವಿಸ್ತರಣೆ ಹಾಗೂ ದುರಸ್ತಿ ನಡೆಸುವದಾಗಿ ಅಧ್ಯಕ್ಷೆÉ ಕಾವೇರಮ್ಮ ಸೋಮಣ್ಣ ವಿವರಿಸಿದ್ದಾರೆ.