ಸೋಮವಾರಪೇಟೆ, ನ. 17: ಜೇಸೀ ಸಂಸ್ಥೆಯು ಯುವಜನರು ಮತ್ತು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಉತ್ತಮ ಅವಕಾಶವನ್ನು ಒದಗಿಸುತ್ತಿದೆ ಎಂದು ಕೂಡಿಗೆ ಜ್ಞಾನೋದಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಸ್. ಮುದ್ದಪ್ಪ ಹೇಳಿದರು.
ನಂಜಮ್ಮ ಕಲ್ಯಾಣ ಮಂಟಪದಲ್ಲಿ ಸಂಜೆ ಆಯೋಜಿಸಲಾಗಿದ್ದ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸದವಕಾಶವನ್ನು ಎಲ್ಲರೂ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜೇಸೀ ಅಧÀ್ಯಕ್ಷ ಪ್ರಕಾಶ್ ಮಾತನಾಡಿ, ಸೋಮವಾರಪೇಟೆ ಜೇಸೀ ಸಂಸ್ಥೆಯಿಂದ ತಾ. 20 ರವರೆಗೆ ಸಪ್ತಾಹ ಆಯೋಜಿಸಲಾಗಿದೆ ಎಂದರು. ಜೇಸೀರೇಟ್ಸ್ ಅಧ್ಯಕ್ಷೆ ಮಾಯಾ ಗಿರೀಶ್, ನಿಕಟಪೂರ್ವ ಅಧ್ಯಕ್ಷ ಮನೋಹರ್, ಕಾರ್ಯದರ್ಶಿ ರುಬೀನ ಉಪಸ್ಥಿತರಿದ್ದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.