ಸೋಮವಾರಪೇಟೆ, ನ. 17: ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸರ್ವ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಆಶ್ರಯದಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ತಾ. 20 ರಂದು ಆಯೋಜಿಸಲಾಗಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ತಾಲೂಕಿನಲ್ಲಿರುವ 6 ರಿಂದ 16 ವರ್ಷ ವಯೋಮಾನದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ತಾ. 20 ರಂದು ಪೂರ್ವಾಹ್ನ 10 ಗಂಟೆಗೆ, ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ನಡೆಸಲಾಗುವದು.
ಪೂರ್ಣ ಅಂಧತ್ವ, ಭಾಗಶಃ ದೃಷ್ಟಿದೋಷ, ಶ್ರವಣ ದೋಷ, ಮಾತಿನ ವಿಕಲತೆ, ದೈಹಿಕ-ಮಾನಸಿಕ ವಿಕಲತೆ, ಕಲಿಕಾ ನ್ಯೂನತೆ, ಮೆದುಳು ಪಾಶ್ರ್ವವಾಯು, ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್, ಬಹುವಿಕಲತೆ, ಕುಷ್ಟರೋಗ ನಿವಾರಣೆ ನ್ಯೂನತೆ, ಬೌದ್ಧಿಕ ವಿಕಲತೆ, ಕುಬ್ಜತೆ, ಸ್ನಾಯುಕ್ಷೀಣ ಮಾಂಸ ಖಂಡಗಳ ನ್ಯೂನತೆ, ದೀರ್ಘ ಕಾಲದ ನರ ದೋಷ, ಬಹು ಅಂಗಾಂಗ ನ್ಯೂನತೆ, ಥಾಲಸ್ಸೆಮಿಯಾ, ಹಿಮೋಫಿಲಿಯ, ಸಿಕ್‍ಲೆಸ್ ನ್ಯೂನತೆ, ಆಸಿಡ್ ಧಾಳಿಗೆ ತುತ್ತಾದವರು, ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವವರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9008142723ನ್ನು ಸಂಪರ್ಕಿಸಬಹುದಾಗಿದೆ.