ಮಡಿಕೇರಿ, ನ. 17: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಪಾವತಿಗೆ ಉಳಿಸಿಕೊಂಡವರು ಹಿಂದಿನ ಸಾಲಿನ ತೆರಿಗೆ ಪಾವತಿ ವಿವರದೊಂದಿಗೆ ನಗರಸಭೆ ಕಚೇರಿಗೆ ಬಂದು ಆನ್‍ಲೈನ್ ತೆರಿಗೆ ಲೆಕ್ಕಾಚಾರದ ಚಲನ್ ಪಡೆದು ನಗರಸಭೆ ಕಚೇರಿಯಲ್ಲಿಯೇ ಬ್ಯಾಂಕ್ ಸಿಬ್ಬಂದಿ ಮುಖಾಂತರ ಅಧಿಕೃತ ಚಲನ್‍ನಂತೆ ತೆರಿಗೆ ಮೊತ್ತ ಪಾವತಿಸಿಕೊಳ್ಳಲು ಅವಕಾಶ ಮಾಡಿರುವಂತೆ ತೆರಿಗೆ ಪಾವತಿಸಿ ಸಹಕರಿಸಲು ಕೋರಲಾಗಿದೆ. ತಪ್ಪಿದ್ದಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ ಅಲ್ಲದೆ ಅಂಗಡಿ ಮಳಿಗೆ ಬಾಡಿಗೆ ಮತ್ತು ಜಾಹೀರಾತು ಶುಲ್ಕ ಸಹ ಪಾವತಿಸದೆ ಬಾಕಿ ಉಳಿಸಿಕೊಂಡಲ್ಲಿ ನಲ್ಲಿ ಸಂಪರ್ಕ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿ ಕರ್ನಾಟಕ ಪೌರಸಭೆ ಅಧಿನಿಯಮ 1964ರ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.