ಮಡಿಕೇರಿ: ಮಡಿಕೇರಿ ಹೊಸ ಬಡಾವಣೆಯಲ್ಲಿರುವ ಯುರೋ ಕಿಡ್ಸ್ ಮತ್ತು ಮಡಿಕೇರಿ ಪಬ್ಲಿಕ್ ಶಾಲೆಯ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಚಿತ್ರ ಬಿಡಿಸುವದು, ಛದ್ಮವೇಷ ಸ್ಪರ್ಧೆ ಹಾಗೂ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಿಕ್ಷಕಿಯರು ಮಕ್ಕಳನ್ನು ಹಾಡು, ನೃತ್ಯದಿಂದ ರಂಜಿಸಿದರು. ಬಹುಮಾನ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಶಾಲೆಯ ಎಲ್ಲಾ ಮಕ್ಕಳಿಗೆ ಯುರೋ ಕಿಡ್ಸ್ ವತಿಯಿಂದ ಉಡುಗೊರೆಗಳನ್ನು ಕೊಡಲಾಯಿತು.ಕೂಡಿಗೆ: ಕೂಡ್ಲೂರಿನ ಟೈನಿ ಟಾಟ್ಸ್ ಪ್ರಿ ಕೆಜಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಂಚಾರಿ ಪೆÇಲೀಸ್ ಠಾಣೆಯ ಹೆಡ್ ಕಾನ್ಸ್‍ಟೆಬಲ್ ಆಶಾ ಸುರೇಶ್ ಮತ್ತು ಕುಶಾಲನಗರ ನಗರ ಪೊಲೀಸ್ ಠಾಣೆಯ ಕಾನ್ಸ್‍ಟೆಬಲ್ ಸತ್ಯ ದೇವಿಪ್ರಸಾದ್, ಶಾಲೆಯ ಮುಖ್ಯಸ್ಥೆ ಪುಷ್ಪಾ ವರದ, ವೀಣಾ ಮುಖೇಶ್ ಮತ್ತು ಪೆÇೀಷಕ ವೃಂದವರು ಪಾಲ್ಗೊಂಡಿದ್ದರು.

ಮಕ್ಕಳನ್ನು ರಂಜಿಸಲು ಪೋಷಕರು ಮತ್ತು ಶಿಕ್ಷಕರು ನೃತ್ಯ ಪ್ರದರ್ಶನ ಮಾಡಿದರು. ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ದಿನಾಚರಣೆ ಅಂಗವಾಗಿ ಮಕ್ಕಳಿಗೆ ಸಸಿಗಳನ್ನು ನೀಡಿ ಮರ ಬೆಳಸಿ ಪ್ರಕೃತಿ ಉಳಿಸಿ ಎನ್ನುವ ಸಂದೇಶ ನೀಡಲಾಯಿತು.ಗೋಣಿಕೊಪ್ಪ ವರದಿ: ಮಕ್ಕಳ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ರೋಟರಿ ಕ್ಲಬ್ ದೇವರಪುರದಲ್ಲಿರುವ ಅಮೃತಾವಾಣಿ ವಿಶೇಷ ಮಕ್ಕಳ ಶಾಲೆಯ ಮಕ್ಕಳಿಗೆ ಕಾರ್ಯಕ್ರಮ ನೀಡುವ ಮೂಲಕ ಆಚರಿಸಲಾಯಿತು.

ಮಕ್ಕಳಿಗೆ ಚೆಂಡು ಎಸೆಯುವ ಸ್ಪರ್ಧೆ, ಬಲೂನ್ ಹೊಡೆಯುವದು, ಕಾಳು ಹೆಕ್ಕುವದು ಹೀಗೆ ಹಲವು ಕಾರ್ಯಕ್ರಮ ನೀಡಿ ಬಹುಮಾನ ನೀಡಲಾಯಿತು. ಮಕ್ಕಳು ಹಲವು ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ರಂಜಿಸಿದರು. ಶಿಕ್ಷಕರು ನೀಡುವ ಸನ್ನೆಯಂತೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ರೋಟರಿ ವತಿಯಿಂದ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ರೋಟರಿ ಕ್ಲಬ್ ಅಧ್ಯಕ್ಷ ದಿಲನ್ ಚೆಂಗಪ್ಪ, ರೋಟೇರಿಯನ್ಸ್ ಆನ್ಸ್ ಹಾಗೂ ಅನೆಟ್ಸ್ ಪದಾಧಿಕಾರಿಗಳು ಭಾಗವಹಿಸಿದ್ದರು.ಮೂರ್ನಾಡು: ಮಕ್ಕಳ ದಿನಾಚರಣೆಯ ಅಂಗವಾಗಿ ಮೂರ್ನಾಡು ಹೋಬಳಿ ಜಾನಪದ ಪರಿಷತ್ತು ಸಹಯೋಗದೊಂದಿಗೆ ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಕಿಯಿಲ್ಲದೆ ಅಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ರೀತಿಯ ತಿಂಡಿ-ತಿನಿಸುಗಳನ್ನು ತಯಾರಿಸಿದರು. ಈ ಸಂದರ್ಭ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.