ಸೋಮವಾರಪೇಟೆ, ನ. 17: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ತಾಲೂಕಿನ ಮಾಲಂಬಿ ಗ್ರಾಮದ ಈರ್ವರು ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಉಚಿತ ಅಡುಗೆ ಅನಿಲವನ್ನು ವಿತರಿಸಿದರು.

ಮಾಲಂಬಿ ಗ್ರಾಮದ ಕಲ್ಯಾಣಿ, ಜವರಮ್ಮ ಅವರುಗಳಿಗೆ ಉಜ್ವಲ ಯೋಜನೆಯಡಿ ಬಿಡುಗಡೆಯಾದ ಗ್ಯಾಸ್ ಸಿಲಿಂಡರ್, ಸ್ಟೌವ್‍ಗಳನ್ನು ತಾ.ಪಂ. ಆವರಣದಲ್ಲಿ ವಿತರಿಸಲಾಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ಗಂಗಾಧರ್, ರಾಮಕೃಷ್ಣ ಉಪಸ್ಥಿತರಿದ್ದರು.