ವೀರಾಜಪೇಟೆ, ನ. 16: ಅಖಿಲ ಕೊಡವ ಸಮಾಜದ 41ನೇ ಮಹಾಸಭೆ ತಾ. 20 ರಂದು ಬೆಳಿಗ್ಗೆ 10.30 ಕ್ಕೆ ವೀರಾಜಪೇಟೆಯಲ್ಲಿನ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯಾಧ್ಯಕ್ಷ ಪ್ರೊ. ಇಟ್ಟೀರ ಬಿದ್ದಪ್ಪ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಕೆಲವು ಸಾಧಕರನ್ನು ಸಹ ಸನ್ಮಾನಿಸಲಾಗುತ್ತದೆ ಎಂದು ಸಮಾಜದ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆ ದಿನ ಕೊಡವ ಅರಿವೋಲೆ ಎಂಬ ಕೃತಿ ಬರೆದ ಡಾ. ಬೊವ್ವೇರಿಯಂಡ ಉತ್ತಯ್ಯ ದಂಪತಿಗಳನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಡವ ಸದಸ್ಯರಾದ ರಂಗಭೂಮಿ ಕಲಾವಿದರಾದ ಅಡ್ಡಂಡ ಸಿ. ಕಾರ್ಯಪ್ಪ ದಂಪತಿಗಳಿಗೆ ಸನ್ಮಾನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ , ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಎನ್. ಮಾದಯ್ಯ ಸುಬ್ರಮಣಿ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ, ಜಂಟಿ ಕಾರ್ಯದರ್ಶಿ ಅಪ್ಪುಮಣಿಯಂಡ ತುಳಸಿ ಕಾಳಪ್ಪ ಮತ್ತು ಕಾನೂನು ಸಲಹೆಗಾರರಾದ ಬಲ್ಯಮಾಡ ಮಾದಪ್ಪ ಉಪಸ್ಥಿತರಿದ್ದರು.