ಕೂಡಿಗೆ, ನ. 16 : ಸೀಗೆಹೊಸೂರು ಗ್ರಾಮದಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಲಕ್ಕನೂರು ಹೊಸಹಳ್ಳಿಯ ಕಲ್ಲುಕೋರೆಯ ಲಾರಿಗಳು ಓಡಾಡುತ್ತಿದ್ದು, ರಸ್ತೆಯಲ್ಲಿ ಬೃಹತ್ ಕಲ್ಲು ಗುಂಡಿಗಳು ಏರ್ಪಟ್ಡು ಜನಸಾಮಾನ್ಯರು ತಿರುಗಾಡಲು ಕೂಡ ಆಗುತ್ತಿಲ್ಲ. ದ್ವಿಚಕ್ರ ಸವಾರರ ಗತಿ ಹೇಳತೀರದು. ಆಸ್ಪತ್ರೆಗೆ ತೆರಳುವ ರೋಗಿಗಳನ್ನು ಕರೆದೊಯ್ಯಲು ಆಟೋ ದವರು ಕೂಡ ಬಾರದ ಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಮದಲಾಪುರ ಬಳಿಯ ಬ್ಯಾಡಗೊಟ್ಟದ ಬಳಿ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.. ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ಆಗಮಿಸಿ ಇಲ್ಲಿನ ಜನತೆಯ ಸಂಕಷ್ಟ ಅರಿಯಬೇಕೆಂದು ಆಗ್ರಹಿಸಿದರು.