ಮಡಿಕೇರಿ, ನ. 16: ಕರ್ನಾಟಕ ರಾಜ್ಯ ಸಂಯುಕ್ತ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಮಾವೇಶ ತಾ. 17ರಂದು (ಇಂದು) ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಬೆಳಿಗ್ಗೆ 11ಕ್ಕೆ ನಗರದ ಗಾಂಧಿ ಮೈದಾನದಿಂದ ಮುಖ್ಯರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣದವರೆಗೆ ಮತ್ತು ಅಲ್ಲಿಂದ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆ ಏರ್ಪಡಿಸಲಾಗಿದೆ.
ಕೊಡಗಿನ ಮಳೆಯಿಂದ ಸಂಕಷ್ಟಕ್ಕೊಳಗಾದ ಎಸ್ಟೇಟ್ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಮಾವೇಶದಲ್ಲಿ ಒತ್ತಾಯಿಸಲಾಗುವದು.
ಎಂ. ಶಶಿಧರ್- ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಂಯುಕ್ತ ಕೃಷಿ ಕಾರ್ಮಿಕರ ಸಂಘಟನೆ, ಎಂ. ಉಮಾದೇವಿ- ರಾಜ್ಯ ಅಧ್ಯಕ್ಷೆ- ಎಐಡಿವೈಓ, ಬಿ. ರವಿ- ರಾಜ್ಯ ಸಮಿತಿ ಸದಸ್ಯರು, ಎಸ್‍ಯುಸಿಐ, ಪೂರ್ಣಿಮಾ ಬಸಪ್ಪ- ಕೊಡಗು ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇವರುಗಳು ಭಾಗವಹಿಸಲಿದ್ದಾರೆ.