ಮಡಿಕೇರಿ, ನ. 16: ಹೆಚ್.ಆರ್.ಎಸ್. ಕೊಡಗು ರಿಲೀಫ್ ಸೆಲ್ ಹಾಗೂ ಶಾಂತಿ ಪ್ರಕಾಶನ ವತಿಯಿಂದ ಹೊರತರಲಾಗುತ್ತಿರುವ ಪ್ರವಾದಿ ಮಹಮ್ಮದ್ ಅವರ ಕುರಿತಾದ ಎರಡು ಪುಸ್ತಕಗಳು ತಾ. 17ರಂದು (ಇಂದು) ಲೋಕಾರ್ಪಣೆಗೊಳ್ಳಲಿದೆ.

ಬೆಳಿಗ್ಗೆ 11 ಗಂಟೆಗೆ ಕಾಲೇಜು ರಸ್ತೆ ಬಳಿ ಇರುವ ಕಾರುಣ್ಯ ಸದನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ. ಬಾಲಸುಬ್ರಮಣ್ಯ ಕಂಜರ್ಪಣೆ ಹಾಗೂ ಡಾ. ಶ್ರೀಧರ್ ಹೆಗ್ಡೆ ಅವರುಗಳು ಬಿಡುಗಡೆಗೊಳಿಸುವರು. ಜಮಾಅತೆ ಇಸ್ಲಾಮಿ ಹಿಂದ್‍ನ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮನೆ ಮನೆ ಕಾವ್ಯಗೋಷ್ಠಿ ಸಂಚಾಲಕ ಪಿ.ಎಸ್. ವೈಲೇಶ್ ಉಪಸ್ಥಿತರಿರುವರು.