ಕೂಡಿಗೆ, ನ. 14: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರು, ಗಂಧದಹಾಡಿ, ಭುವನಗಿರಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.
ಆನೆಗಳು ಬಾಣಾವರ ಕಡೆಯಿಂದ ಸೀಗೆಹೊಸೂರು ಮೀಸಲು ಅರಣ್ಯದತ್ತ ಧಾವಿಸಿ, ಈ ವ್ಯಾಪ್ತಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ರೈತರ ಜಮೀನನ್ನು ನಾಶ ಪಡಿಸಿದೆ. ಪಕೃತಿ ವಿಕೋಪದಿಂದ ಅಳಿದುಳಿದು ಬೆಳೆಸಿದ್ದ ಕೆನೆ, ಶುಂಠಿ, ಜೋಳ ಹಾಗೂ ಉಪ ಬೆಳೆಗಳನ್ನು ತುಳಿದು ತಿಂದು ನಷ್ಟಪಡಿಸಿವೆ. ಗೋಪಾಲ, ಚಂದ್ರಪ್ಪ, ಅಣ್ಣಯ್ಯ, ಕೃಷ್ಣ, ಜವರೇಗೌಡರ ಜಮೀನಿಗೆ ಕಾಡಾನೆಗಳು ನುಗ್ಗಿ ಬೆಳೆ ನಾಶಪಡಿಸಿವೆ. ಈ ವ್ಯಾಪ್ತಿಯಲ್ಲಿ ಕಂದಕಗಳನ್ನು ನಿರ್ಮಿಸಿ ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಈ ವ್ಯಾಪ್ತಿಯ ರೈತರುಗಳು ಆಗ್ರಹಿಸಿದ್ದಾರೆ.