ಗುಡ್ಡೆಹೊಸೂರು, ನ. 14: ಇಲ್ಲಿಗೆ ಸಮೀಪದ ಬಸವನಹಳ್ಳಿ ಹೊಸಕಾಡು ಗ್ರಾಮದ ಆಟೋ ಚಾಲಕ ಮಂಜು ಎಂಬವರ ಪುತ್ರಿ ಸಂಜನಾ ಎಂಬಾಕೆ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿಸುವ ವೇಳೆ ಕೈ, ಮುಖದ ಭಾಗಕ್ಕೆ ತೀವ್ರ ರೀತಿಯಲ್ಲಿ ಗಾಯಗಳಾಗಿವೆ. ಸಂಜನಾ ಗುಡ್ಡೆಹೊಸೂರು ಸರಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ. ಇದೀಗ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾಳೆ.