ಗೋಣಿಕೊಪ್ಪ ವರದಿ, ನ. 14 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜûನ್ ಹಾಕಿ ಲೀಗ್‍ನ ಬುಧವಾರದ ಪಂದ್ಯಾವಳಿಯಲ್ಲಿ 3 ತಂಡ ಗೆಲವು ಪಡೆದವು. 1 ಪಂದ್ಯ ಗೋಲು ದಾಖಲಿಸದೆ ಡ್ರಾ ಫಲಿತಾಂಶ ನೀಡಿತು.

ಕಿರುಗೂರು, ಕೋಣನಕಟ್ಟೆ, ಗುಂಡ್ಯತ್ ಅಯ್ಯಪ್ಪ ತಂಡಗಳು ಗೆಲವು ಪಡೆದವು. ಡ್ರಿಬ್‍ಲ್ಸ್ ಹಾಗೂ ಪಾರಣೆ ತಂಡಗಳ ಪಂದ್ಯ ಗೋಲು ದಾಖಲಿಸದೆ ಡ್ರಾದಲ್ಲಿ ಅಂತ್ಯವಾಯಿತು.

ಕಿರುಗೂರು ತಂಡವು ಕಾಲ್ಸ್ ತಂಡದ ವಿರುದ್ಧ 6-1 ಗೋಲುಗಳ ಗೆಲವು ದಾಖಲಿಸಿತು. ಕಾಲ್ಸ್ ಪರ 12 ನೇ ನಿಮಿಷದಲ್ಲಿ ಶ್ರವಣ್ ಏಕೈಕ ಗೋಲು ಹೊಡೆದರು. ಕಿರುಗೂರು ಪರ 22 ಹಾಗೂ 41 ನೇ ನಿಮಿಷಗಳಲ್ಲಿ ಕವನ್, 24 ರಲ್ಲಿ ಬಿಪಿನ್, 25 ರಲ್ಲಿ ಸೋಮಣ್ಣ, 36 ರಲ್ಲಿ ಸುಬ್ಬಯ್ಯ, 49 ರಲ್ಲಿ ರಚನ್ ಗೋಲು ಬಾರಿಸಿದರು.

ಕೋಣನಕಟ್ಟೆ ತಂಡವು ಕುಂದ ತಂಡವನ್ನು 7-1 ಗೋಲುಗಳಿಂದ ಮಣಿಸಿತು. ಕೋಣನಕಟ್ಟೆ ಪರ ಗಣಪತಿ 8, 24, 45 ನೇ ನಿಮಿಷಗಳಲ್ಲಿ ಮೂರು ಗೋಲು ಹೊಡೆದರು. 21 ಹಾಗೂ 35 ನೇ ನಿಮಿಷಗಳಲ್ಲಿ ಸಾವನ್ 2 ಗೋಲು, 26 ರಲ್ಲಿ ದೀಪಕ್ 1 ಗೋಲು, 39 ರಲ್ಲಿ ಅಪ್ಪಣ್ಣ 1 ಗೋಲು ಹೊಡೆದು ಗೆಲವಿನ ಅಂತರ ಹೆಚ್ಚಿಸಲು ಕಾರಣವಾದರು. ಕುಂದ ಪರ 13 ನೇ ನಿಮಿಷದಲ್ಲಿ ಗಗನ್ ಏಕೈಕ ಗೋಲು ಹೊಡೆದರು.

ಗುಂಡ್ಯತ್ ಅಯ್ಯಪ್ಪ ತಂಡವು ಎಸ್‍ಎನ್‍ಕೆಎಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಗುಂಡ್ಯತ್ ಪರ 9 ಹಾಗೂ 13 ನೇ ನಿಮಿಷಗಳಲ್ಲಿ ಬೋಪಣ್ಣ, 3 ರಲ್ಲಿ ತಾಂಜûಲ್, 20 ರಲ್ಲಿ ಕಾಳಪ್ಪ, ಎಸ್‍ಎನ್‍ಕೆಎಸ್ ಪರ 25 ಹಾಗೂ 29 ನೇ ನಿಮಿಷಗಳಲ್ಲಿ ಬೋಪಣ್ಣ 2 ಗೋಲು ಹೊಡೆದರು.

ಡ್ರಿಬ್‍ಲ್ಸ್ ಹಾಗೂ ಪಾರಣೆ ತಂಡ ಗಳ ನಡುವಿನ ಪಂದ್ಯ ಗೋಲಿಲ್ಲದೆ ಡ್ರಾ ಫಲಿತಾಂಶ ನೀಡಿತು. ಉಭಯ ತಂಡಗಳು ಸ್ಪರ್ಧಾತ್ಮಕ ಆಟ ಪ್ರದರ್ಶಿಸಿ ತ್ತಾದರೂ ಗೋಲು ದಾಖಲಿಸಲಾಗದೆ ನಿರಾಸೆ ಮೂಡಿಸಿದವು.

ವರದಿ - ಸುದ್ದಿಪುತ್ರ