ಶನಿವಾರಸಂತೆ, ನ. 14: ಕಟ್ಟೆಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ಬೆಳಿಗ್ಗಿನ ಜಾವ ಟ್ರ್ಯಾಕ್ಟರ್ (ನಂ. ಕೆಎ 12 ಎ 9732)ನಲ್ಲಿ ಮರಳು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಚಾಲಕ ಟ್ರ್ಯಾಕ್ಟರನ್ನು ಬಿಟ್ಟು ಪರಾರಿಯಾಗಿದ್ದಾನೆ.

ಪೊಲೀಸರು ಮರಳು ಸಹಿತ ಟ್ರ್ಯಾಕ್ಟರನ್ನು ವಶಪಡಿಸಿಕೊಂಡು ಕೊಡ್ಲಿಪೇಟೆಯ ಉಪ ಠಾಣೆಗೆ ತಂದು ನಿಲ್ಲಿಸಿ ಪ್ರಕರಣ ದಾಖಲಿಸಿದ್ದಾರೆ.