ಮಡಿಕೇರಿ, ನ. 14: ದಿ. ವಿ.ಜಿ. ಭಟ್ಟರ ಸ್ಮರಾಣರ್ಥ ನಡೆಸಲಾದ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಸಂಪಾಜೆಯ ಕವಯತ್ರಿ ಸ್ಮಿತಾ ಅಮೃತ್‍ರಾಜ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸ್ಮಿತಾ ಅವರ ‘ಭೂಮಿ ತೂಗುವ ಹಕ್ಕಿ’ ಕವಿತೆಗೆ ಬಹುಮಾನ ಬಂದಿದ್ದು, ತಾ. 25 ರಂದು ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರೂ. 5 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ಸ್ವೀಕರಿಸಲಿದ್ದಾರೆ.
ಇದಲ್ಲದೆ ಧಾರವಾಡದ ಲಡಾಯಿ ಪ್ರಕಾಶನ ನಡೆಸುವ ಪ್ರತಿಷ್ಠಿತ ವಿಭಾ ಪ್ರಶಸ್ತಿಯ ಅಂತಿಮ ಸುತ್ತಿನ ಹತ್ತೂ ಮಂದಿ ಪೈಕಿ ಸ್ಮಿತಾ ಅವರ ಹೆಸರೂ ಕೂಡ ಸೇರ್ಪಡೆಗೊಂಡಿತ್ತು. ಅಂತಿಮವಾಗಿ ಶಿವಮೊಗ್ಗದ ಪತ್ರಕರ್ತ ಎನ್. ರವಿಕುಮಾರ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.