ಮಡಿಕೇರಿ, ನ. 12 : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನವೆಂಬರ್ 28 ರಂದು ಬಳಗದ ವತಿಯಿಂದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಾನಪದ ಗೀತೆಗಳ ಗುಂಪು ಗಾಯನ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯ ಕ್ಷೇತ್ರದ ಕುರಿತು ಛದ್ಮವೇಶ ಸ್ಪರ್ಧೆ (5,6,7, ಹಾಗೂ 8ನೇ ತರಗತಿ ತನಕ), ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಹಾಗೂ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ನೀಡುವ ವಿಷಯದ ಕುರಿತು 2 ನಿಮಿಗಳ ಕಾಲ ಮಾತನಾಡುವ ಆಶುಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗುಂಪು ಗಾಯನ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಕನಿಷ್ಟ 4 ಜನ ಗರಿಷ್ಠ 6 ಸ್ಪರ್ಧಾಳುಗಳು ಇರಬೇಕು. ಅಗತ್ಯ ವಸ್ತು ಹಾಗೂ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಸಂಗೀತ ಉಪಕರಣಗಳನ್ನು ಬಳಸಬಹುದು. ಸಮೂಹ ಗೀತೆಗಳ ಅವಧಿ 3 ರಿಂದ 4 ನಿಮಿಷಗಳು ಮಾತ್ರ. ಕನ್ನಡ ಜಾನಪದ ಹಾಡುಗಳನ್ನೇ ಹಾಡಬೇಕು. ನೃತ್ಯದಲ್ಲಿ ವಸ್ತ್ರ ವಿನ್ಯಾಸಕ್ಕೂ ಅಂಕ ನೀಡಲಾಗುವದು. ಆಸಕ್ತರು ತಾ. 22ರ ಒಳಗಾಗಿ ಬಳಗದ ಅಧ್ಯಕ್ಷ ಕೇಶವ್ ಕಾಮತ್ (9448346276) ಪ್ರಧಾನ ಕಾರ್ಯದರ್ಶಿ ಐತಿಚಂಡ ರಮೇಶ್ ಉತ್ತಪ್ಪ (9483049005) ನಿರ್ದೇಶಕಿ ರೇವತಿ ರಮೇಶ್ (9663254829) ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.