ಶನಿವಾರಸಂತೆ, ನ. 12: ಪರವಾನಗಿ ಇಲ್ಲದೆ ಟ್ರ್ಯಾಕ್ಟರ್ನಲ್ಲಿ ಮರಳು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತೋಯಳ್ಳಿ ದುಂಡಳ್ಳಿ ಗ್ರಾಮದಲ್ಲಿ ಮರಳು ಸಹಿತ ಟ್ರ್ಯಾಕ್ಟರ್ (ಕೆಎ-12- ಟಿ-6947) ವಶಪಡಿಸಿಕೊಂಡಿದ್ದು, ಆರೋಪಿ ಚಾಲಕ ಪರಾರಿಯಾಗಿದ್ದಾನೆ.
ಮರಳು ತುಂಬಿದ ಟ್ರ್ಯಾಕ್ಟರ್ ಅನ್ನು ಶನಿವಾರಸಂತೆ ಪೊಲೀಸ್ ಠಾಣೆ ಮುಂಭಾಗ ತಂದು ನಿಲ್ಲಿಸಿ, ಪ್ರಕರಣ ದಾಖಲಿಸಲಾಗಿದೆ.