ಸುಂಟಿಕೊಪ್ಪ, ನ. 12: ಹೆರೂರು ಗ್ರಾಮದ ಹರೀಶ್ ಎಂಬವರ ಹಸುವಿನ ಮೇಲೆ ಹುಲಿಯೊಂದು ಧಾಳಿ ನಡೆಸಿ ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದ ನಿವಾಸಿ ಕೆ.ಕೆ. ಹರೀಶ್ ಅವರು ಎಂದಿನಂತೆ ತಮ್ಮ ಮನೆಯ ಹಸುವನ್ನು ಮೇಯಲು ತೋಟದ ಬೇಲಿಗೆ ಕಟ್ಟಿಹಾಕಿದ್ದರು. ಮಧ್ಯಾಹ್ನ 1 ಗಂಟೆಯಲ್ಲಿ ಹಸುವಿಗೆ ನೀರನ್ನು ನೀಡಲು ತೆರಳಿದ್ದಾರೆ. ಆದರೆ ಮೇಯಲು ಕಟ್ಟಿದ್ದ ಜಾಗದಲ್ಲಿ ಕಂಡು ಬಾರದ ಹಿನ್ನಲೆ ಹುಡುಕಾಟ ನಡೆಸಿದ ಸಂದರ್ಭ ಸ್ವಲ್ಪ ದೂರದಲ್ಲಿಯೇ ಇದ್ದ ಕಾಡಿನೊಳಗೆ ಹಸುವಿನ ಮೇಲೆ ಹುಲಿ ಧಾಳಿ ನಡೆಸಿ ಕೊಂದು ಹಾಕಿರುವದು ಬೆಳಕಿಗೆ ಬಂದಿದೆ.

ಗ್ರಾಮದ ಕೃಷಿ ಕಾರ್ಮಿಕರಲ್ಲಿ ಆತಂಕ ಉಂಟಾಗಿದ್ದು ನಾಣ್ಣಯ್ಯ, ಚಂದ್ರಶೇಖರ್ ಪ್ರಶಾಂತ್ ಇವರಗಳು ಕೂಡಲೇ ಅರಣ್ಯ ಇಲಾಖೆಯವರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.