ಶನಿವಾರಸಂತೆ, ನ. 11: ದೊಡ್ಡಕೊಡ್ಲಿ ಗ್ರಾಮದ ಕಲ್ಲುಕೋರೆಯ ನಿವಾಸಿ ಕೆ. ಅಬೂಬಕ್ಕರ್ ಎಂಬಾತ ತನ್ನ ಮನೆಯ ಪಕ್ಕದ ಶೆಡ್ಡಿನಲ್ಲಿ ಕಲ್ಲು ಸಿಡಿಸಲು ಉಪಯೋಗಿಸುವ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದನ್ನು ಪತ್ತೆ ಹಚ್ಚಿ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಮುರುಳಿ, ಪ್ರದೀಪ್‍ಕುಮಾರ್, ಸಂತೋಷ್, ಶಫೀರ್, ಶಶಿ, ಚಾಲಕ ವಿವೇಕ್ ಪಾಲ್ಗೊಂಡಿದ್ದರು.