ಕುಶಾಲನಗರ, ನ. 11: ಅಖಿಲ ಭಾರತ ಸನ್ಯಾಸಿ ಸಂಘ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ 8ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಾ. 15 ರಂದು ತಮಿಳುನಾಡಿನ ಪೂಂಪ್‍ಹಾರ್‍ನಲ್ಲಿ ಸಮಾರೋಪಗೊಳ್ಳಲಿದೆ. ತಲಕಾವೇರಿ ಕ್ಷೇತ್ರದಿಂದ ಪ್ರಾರಂಭಗೊಂಡ ರಥಯಾತ್ರೆ ತಾ. 15 ರಂದು ಪೂಂಪ್‍ಹಾರ್ ಪೂರ್ಣೇಶ್ವರಿ ದೇವಾಲಯದ ಮುಂಭಾಗ ಸಮಾರೋಪಗೊಳ್ಳಲಿದೆ. ಜಿಲ್ಲೆಯಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು ಎಂದು ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.