ಕೂಡಿಗೆ, ನ. 11: ಸಮೀಪದ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಕೃಷೇಗೌಡ ಒಂದು ಮತದ ಅಂತರದಲ್ಲಿ ಆಯ್ಕೆಗೊಂಡಿದ್ದಾರೆ.
ಸಂಘದ ಅವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪ್ರತವನ್ನು ಕೆ.ಎಸ್ ಕೃಷ್ಣೇಗೌಡ, ಚಂದ್ರಪ್ಪ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಕುಮಾರ, ಹೆಚ್.ಆರ್. ಭಾಗ್ಯ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಗುಪ್ತ ಮತದಾನ ನಡೆದು ಅದರಲ್ಲಿ ಕೃಷ್ಣೇಗೌಡ ಅವರಿಗೆ 7 ಮತಗಳು ಮತ್ತು ಚಂದ್ರಪ್ಪ ಅವರಿಗೆ 6 ಮತಗಳು ದಕ್ಕಿದ್ದು, ಒಂದು ಮತದ ಅಂತರದಲ್ಲಿ ಅಧ್ಯಕ್ಷರಾಗಿ ಕೆ.ಎಸ್. ಕೃಷ್ಣೇಗೌಡ ಅವರು ಆಯ್ಕೆಗೊಂಡರು. ಇದೆ ರೀತಿಯಲ್ಲಿ ಉಪಾಧ್ಯಕ್ಷರಾಗಿ ಪ್ರೇಮಕುಮಾರ ಆಯ್ಕೆ ಗೊಂಡರು.
ಈ ಚುನಾವಣೆಯಲ್ಲಿ ಸಹಕಾರ ಸಂಘ ಮೇಲ್ವಿಚಾರಕರಿಗೆ ಮತದಾನದ ಹಕ್ಕು ಇದ್ದಿದ್ದರಿಂದ ಒಂದು ಮತ ನಿರ್ಣಾಯಕವಾಗಿತ್ತು. ಚುನಾವಣಾ ಅಧಿಕಾರಿಯಾಗಿ ತೊರೆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಕಾರ್ಯನಿರ್ವಹಿಸಿದರು. ಈ ಸಂದರ್ಭ ಸಂಘದ ವ್ಯವಸ್ಥಾಪಕ ಜೀವನ್ ಹಾಗೂ ನಿರ್ದೇಶಕರು ಇದ್ದರು.