ಮಡಿಕೇರಿ, ನ.10: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸ್ವಯಂಪ್ರೇರಿತ ಕೊಡಗು ಬಂದ್ ಕರೆಗೆ ಇಂದು ಬಹುತೇಕ ಕಡೆಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ನಗರ ಸೇರಿದಂತೆ ವೀರಾಜಪೇಟೆ ತಾಲೂಕು ಹಾಗೂ ಸೋಮವಾರಪೇಟೆಯಲ್ಲಿ ಶೇ. 95ರಷ್ಟು ಸ್ವಯಂ ಬಂದ್ ಆಚರಿಸಲಾಗಿದೆ.
ಮಡಿಕೇರಿ ತಾಲೂಕಿನ ಕೆಲವೆÀಡೆ ಮಿಶ್ರ ಪ್ರತಿಕ್ರಿಯೆಯಿದ್ದರೆ, ಇತರೆಡೆ ಬಂದ್ ಯಶಸ್ವಿಗೊಂಡಿದೆ. ವೀರಾಜಪೇಟೆ ತಾಲೂಕಿನ ಕಡಂಗ, ಸಿದ್ದಾಪುರ, ಪಾಲಿಬೆಟ್ಟ, ಚೆನ್ನನಕೋಟೆ ಹೊರತಾಗಿ ಉತ್ತಮ ಸ್ಪಂದನ ಲಭಿಸಿದೆ. ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಕುಶಾಲನಗರ, ಸುಂಟಿಕೊಪ್ಪ ಮುಂತಾದೆಡೆ ಕೆಲವರು ಬಂದ್‍ಗೆ ಅಸಹಕಾರ ತೋರಿದ ವರದಿ ಲಭಿಸಿದೆ.ಖಾಸಗಿ ಬಸ್‍ಗಳು ಹಾಗೂ ಆಟೋಗಳ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆ ರಾಜ್ಯ ಸಾರಿಗೆ ಬಸ್‍ಗಳ ಹೊರತಾಗಿ ಗ್ರಾಮೀಣ ಸಾರಿಗೆ ಕೂಡ ಪ್ರಯಾಣಿಕರಿಲ್ಲದೆ ನಿಲುಗಡೆ ಗೊಂಡಿದ್ದಾಗಿ ತಿಳಿದುಬಂದಿದೆ.
(ಮೊದಲ ಪುಟದಿಂದ) ಪರಿಣಾಮ ಜಿಲ್ಲೆಯ ಬಹುತೇಕ ಶಾಲಾ - ಕಾಲೇಜುಗಳು ತೆರೆಯಲ್ಪಟ್ಟಿದ್ದರೂ, ಮಕ್ಕಳ ಕೊರತೆಯಿಂದ ದೈನಂದಿನ ಪಠ್ಯಕ್ರಮ ಚಟುವಟಿಕೆ ನಡೆಸಲು ತೊಂದರೆಯಾದ ಕುರಿತು ತಿಳಿದುಬಂದಿದೆ. ಜಿಲ್ಲಾ ಆಡಳಿತ ಭವನ ಸೇರಿದಂತೆ ತಾಲೂಕು ಕಚೇರಿಗಳು, ಬ್ಯಾಂಕ್‍ಗಳು ದೈನಂದಿನ ಕಾರ್ಯಗಳಿಂದ ಸಾರ್ವಜನಿಕರು ದೂರವೇ ಉಳಿದಂತೆ ಬಾಸವಾಯಿತು.
ಮಡಿಕೇರಿ ವಿಜಯ ವಿನಾಯಕ ದೇವಾಲಯದ ವಾರ್ಷಿಕೋತ್ಸವ ಹಿನ್ನೆಲೆ ಆ ಬಡಾವಣೆಯಲ್ಲಿ ಜನತೆ ಕಾಣಿಸಿಕೊಂಡರೂ, ಉಳಿದೆಡೆಗಳಲ್ಲಿ ಬಣಗುಟ್ಟುತ್ತಿದ್ದ ದೃಶ್ಯದೊಂದಿಗೆ ಜನರಿಲ್ಲದೆ ಕೇವಲ ನಿಯೋಜಿತ ಭದ್ರತಾ ಪಡೆಗಳಷ್ಟೇ ಕಣ್ಣಿಗೆ ಎದುರಾಗುತ್ತಿದ್ದದ್ದು ಹೊರತು ವಾಹನ ಓಡಾಟವು ವಿರಳವಿತ್ತು. ಎಲ್ಲವೂ ಶಾಂತಿ ಪೂರ್ಣವಿದ್ದು ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಹಾಗೂ ನಾಡಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ನಾಪೆÇೀಕ್ಲುವಿನಲ್ಲಿ ಮಿಶ್ರ ಪ್ರತಿಕ್ರಿಯೆ
ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಮತ್ತು ಇತರ ಸಂಘಟನೆಗಳು ಕರೆದಿದ್ದ ಕೊಡಗು ಬಂದ್‍ಗೆ ನಾಪೆÇೀಕ್ಲುವಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಪಟ್ಟಣದ ಕೆಲವು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿದ್ದರೆ, ಉಳಿದ ಅಂಗಡಿಗಳನ್ನು ಎಂದಿನಂತೆ ತೆರೆಯಲಾಗಿತ್ತು. ಬಲಾತ್ಕಾರವಾಗಿ ಅಂಗಡಿ ಮುಚ್ಚಿಸುವ ಮತ್ತು ತೆರೆಸುವ ಘಟನೆ ಎಲ್ಲಿಯೂ ಕಂಡುಬಂದಿಲ್ಲ.
ಖಾಸಗಿ ಮತ್ತು ಸರಕಾರಿ ಬಸ್ಸುಗಳ ಓಡಾಟವಿಲ್ಲದ ಕಾರಣ ಪಟ್ಟಣದಲ್ಲಿ ಜನಜಂಗುಳಿ ಕಡಿಮೆಯಾಗಿತ್ತು. ಆಟೋ ನಿಲ್ದಾಣದಲ್ಲಿ ಆಟೋಗಳ ಸಂಖ್ಯೆ ಎಂದಿನಂತೆ ಇದ್ದರೂ ಪ್ರಯಾಣಿಕರು ಇಲ್ಲದ ಕಾರಣ ಹೆಚ್ಚಿನ ಆಟೋಗಳ ಓಡಾಟವಿರಲಿಲ್ಲ. ಖಾಸಗಿ ವಾಹನಗಳ ಓಡಾಟದಲ್ಲಿಯೂ ವಿರಳತೆ ಕಂಡು ಬಂತು. ಬಸ್ ಸಂಪರ್ಕ ಇಲ್ಲದ ಕಾರಣ ವಿದ್ಯಾರ್ಥಿಗಳ ಹಾಜರಾತಿ ಇಲ್ಲದೆ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಉಳಿದಂತೆ ಯಾವದೇ ಅಹಿತಕರ ಘಟನೆ ನಡೆದಿಲ್ಲ.
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಠಾಣಾಧಿಕಾರಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಭಾಗಮಂಡಲ ಬಂದ್
ಭಾಗಮಂಡಲ, ನ. 10: ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ಕರೆಕೊಟ್ಟ ಹಿನ್ನೆಲೆಯಲ್ಲಿ ಭಾಗಮಂಡಲ - ಚೇರಂಬಾಣೆ, ತಲಕಾವೇರಿ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ಸು ಕಂಡಿತು. ಅಂಗಡಿ - ಮುಂಗಟ್ಟುಗಳು ಬಂದ್ ಆಗಿದ್ದವು. ವಾಹನಗಳ ಓಡಾಟವಿರಲಿಲ್ಲ. ಯಾತ್ರಾರ್ಥಿಗಳು ಬೆರಳೆಣಿಕೆಯಷ್ಟು ಮಾತ್ರ ಕಂಡುಬಂದರು. ಪಿಂಡ ಅರ್ಪಿಸುವವರು ಕೂಡ ತೀರಾ ಕಡಿಮೆಯಿದ್ದರು. ಹೊಟೇಲ್‍ಗಳು ಬಂದ್ ಆಗಿದ್ದರಿಂದ ಬಂದವರೆಲ್ಲರೂ ಭಗಂಡೇಶ್ವರ ದೇವಾಲಯದಲ್ಲಿ ಊಟ ಮುಗಿಸಿ ತೆರಳುತ್ತಿದ್ದುದು ಕಂಡು ಬಂದಿತು. ಬಿಗಿ ಪೊಲೀಸ್ ಬಂದೋ ಬಸ್ತ್ ಇದ್ದುದರಿಂದ ಯುವಕರ ತಂಡ ಪಟ್ಟಣದಲ್ಲಿ ಕಂಡುಬಾರದೆ ತಂಡೋಪ ತಂಡವಾಗಿ ಬೆಟ್ಟ- ಗುಡ್ಡಗಳಿಗೆ ಚಾರಣ ತೆರಳಿ ಸಂಭ್ರಮಿಸಿ ಸಂಜೆ ವೇಳೆಗೆ ಕೆಳಗಿಳಿದು ಮನೆಯತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂದಿತು.