ನ. 10: ಈ ಹಿಂದೆ ಟಿಪ್ಪು ಜಯಂತಿ ಗಲಭೆ ಸಂದರ್ಭ ಸಾವನ್ನಪ್ಪಿದ ವಿಶ್ವಹಿಂದೂ ಪರಿಷತ್ ನಡೆಸಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಂತರ ಟಿಪ್ಪು ಜಯಂತಿ ಆಚರಣೆಗೆ ವಿರೋಧವೊಡ್ಡಿ ಪೊಲೀಸರಿಂದ ಬಂದನಕ್ಕೊಳಗಾದರು. ಕೆಲಕಾಲದ ಬಳಿಕ ಬಂಧಿತರನ್ನು ಬಿಡುಗಡೆ ಗೊಳಿಸಲಾಯಿತು.ರಾಜ್ಯ ಸರ್ಕಾರದ ನಿರ್ದೇಶನ ದಂತೆ ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಯೋಜನೆ ಗೊಂಡಿತ್ತು. ಎರಡು ವರ್ಷಗಳ ಹಿಂದೆ ಟಿಪ್ಪು ಜಯಂತಿ ಸಂದರ್ಭ ಸಂಘರ್ಷ ಉಂಟಾಗಿ ಸಾವು - ನೋವು ಸಂಭವಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವದಿಲ್ಲ; ಪ್ರತಿಭಟನೆ ನಡೆಸುವದಾಗಿ ಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದವು.